ಬೈಂದೂರು: ಸಂಚಲನ(ರಿ.) ಹೊಸೂರು ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ವತಿಯಿಂದ ಡಿ.11 ,12 ಹಾಗೂ 13 ರಂದು ಕೆ.ವಿ ಸುಬ್ಬಣ್ಣ ಬಯಲು ವನರಂಗ ಮಂದಿರ ಹೊಸೂರಿನಲ್ಲಿ ನಡೆಯಬೇಕಿದ್ದ ವನಸಿರಿಯಲ್ಲೊಂದು ರಂಗ ಸುಗ್ಗಿ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಕಾರ್ಯಕ್ರವವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರ ನಿಧನದ ಹಿನ್ನೆಲ್ಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ಶೋಕಾಚರಣೆ ಇರುವ ಕಾರಣ ನಾಟಕೋತ್ಸವ ಮುಂದೂಡಲಾಗಿದ್ದು ಡಿ.16 ರಿಂದ 18 ರವರೆಗೆ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಲನ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.