ಶಿರೂರು: ಶ್ರೀ ಎರಗೇಶ್ವರ ಕ್ರೀಡಾ ಸಂಘ ಮೇಲ್ಪಂಕ್ತಿ ಶಿರೂರು ಇದರ 23ನೇ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.03 ರಂದು ಮೇಲ್ಪಂಕ್ತಿ ಎರಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.ಸಂಜೆ ಸಭಾ ಕಾರ್ಯಕ್ರಮ ಬಳಿಕ ರಾತ್ರಿ 9:30ಕ್ಕೆ ರವೀಂದ್ರ ಕಿಣಿ ನಿರ್ದೇಶನದ ತಾಳಿ ಕಟ್ಟಿದ್ದರು ಗಂಡನಲ್ಲ (ಜ್ಯೋತಿ ಕಿರಣ್) ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.