ಶಿರೂರು; ಕಳೆದ ಹಲವು ವರ್ಷಗಳ ಬಳಿಕ ಪ್ರಪ್ರಥಮ ಬಾರಿಗೆ ಶಿರೂರು ಕಾಲೇಜು ಮೈದಾನದಲ್ಲಿ ಅದ್ದೂರಿಯ ಯಕ್ಷಗಾನ ನ.29 ರಂದು ರಾತ್ರಿ ನಡೆಯಲಿದೆ.ಯಕ್ಷ ಸಂಘಟಕ ದೀಪಕ್ ಕುಮಾರ್ ಶೆಟ್ಟಿ ಶಿರೂರು ಮುಂದಾಳತ್ವದಲ್ಲಿ ಪೆರ್ಡೂರು ಮೇಳದ ಕಲಾವಿದರಿಂದ ಪರ್ಣ ಕುಟೀರ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಆಕರ್ಷಕ ಹಿಮ್ಮೇಳ ಹಾಗೂ ಮುಮ್ಮೇಳದ ಜೊತೆಗೆ ಹಲವು ವಿಶೇಷ ಪ್ರಯೋಗ ಮತ್ತು ಆಕರ್ಷಣೆಗಳು ಅಳವಡಿಸಲಾಗಿದೆ.ಅತ್ಯಂತ ವಿಶೇಷವಾದ ರಂಗ ಸಂಯೋಜನೆಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
