ಬೈಂದೂರು: ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಬೈಂದೂರು ಇದರ ಕಳವಾಡಿ ಶ್ರೀ ಮಾರಿಕಾಂಬಾ ಕ್ಷೇತ್ರ ಮಹಾತ್ಮೆ ಪ್ರಸಂಗ ಲೋಕಾರ್ಪಣೆ, ಶ್ರೀ ಕ್ಷೇತ್ರದ ವೀರಭದ್ರ ಸ್ವಾಮಿಗೆ ರಜತ ಮುಖವಾಡ ಸಮರ್ಪಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಉದ್ಯಮಿ ಯು.ಬಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೈಂದೂರು ಕ್ಷೇತ್ರದ ಕಳವಾಡಿ ಮಾರಿಕಾಂಬಾ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ.ಅತ್ಯಂತ ಪ್ರಸಿದ್ದ ಪುಣ್ಯ ಕ್ಷೇತ್ರವಾಗಿದೆ.ಈ ದೇವಳದ ಜೀರ್ಣೋದ್ದಾರವಾದ ಬಳಿಕ ಬೈಂದೂರು ಸಾಕಷ್ಟು ಪ್ರಗತಿ ಕಂಡಿದೆ.ದೇವಸ್ಥಾನಕ್ಕೆ ಅಗತ್ಯವಾದ ರಸ್ತೆ ನಿರ್ಮಾಣ ಮಾಡಿದಾಗ ಇನ್ನಷ್ಟು ಭಕ್ತರಿಗೆ ಅನುಕೂಲವಾಗಲಿದೆ.ಹೀಗಾಗಿ ಎಲ್ಲರ ಸಹಕಾರದಲ್ಲಿ ದೈವ ಕಾರ್ಯ ಸಂಪನ್ನಗೊಳ್ಳಬೇಕಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳವಾಡಿ ದೇವಸ್ಥಾನ ಬೈಂದೂರು ಕ್ಷೇತ್ರದ ಅತ್ಯಂತ ಪ್ರಸಿದ್ದ ಶಕ್ತಿ ಕೇಂದ್ರವಾಗಿದೆ.ಅಜೀವರ್ಣವಸ್ಥೆ ಬಳಿಕ ಭಕ್ತರ ಸಹಕಾರದಲ್ಲಿ ಜೀರ್ಣೋದ್ದಾರಗೊಂಡು ನಿತ್ಯ ನೂರಾರು ಭಕ್ತರನ್ನು ಸೆಳೆಯುತ್ತಿದೆ.ಕ್ಷೇತ್ರ ವೃದ್ದಿಯಾಗಬೇಕಾದರೆ ಆಚರಣೆಗಳು ಗಟ್ಟಿಯಾಗಬೇಕು.ಮೊವತ್ತು ವರ್ಷದ ಬಳಿಕ ಈ ದೇವಸ್ಥಾನ ಯಕ್ಷಗಾನ ಮೇಳ ಪುನರ್ ಸಂಘಟನೆಗೊಂಡು ತಿರುಗಾಟ ಆರಂಭಿಸಿರುವುದು ಅತ್ಯುತ್ತಮ ಬೆಳವಣಿಗೆ ಎಂದರು.
ಧಾರ್ಮಿಕ ಮುಖಂಡ ಕೃಷ್ಣಮೂರ್ತಿ ಮಂಜರು ಪ್ರಸಂಗ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾಬು ಶೆಟ್ಟಿ ತಗ್ಗರ್ಸೆ, ಕೇಂಜ ಶ್ರೀಧರ ತಂತ್ರಿ,ಬಹುಮೇಳಗಳ ಯಜಮಾನ ಕಿಶನ್ ಹೆಗ್ಡೆ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಪ್ರಸಂಗಕರ್ತ ಡಾ.ಕೆ.ಬಸವ್‌ರಾಜ್ ಶೆಟ್ಟಿಗಾರ್,ಮೇಳದ ಸಂಚಾಲಕ ಗುಂಡು ಕಾಂಚನ್,ಬಗ್ವಾಡಿ ಮಹಿಷಾಸುರ ಮಧಿ೯ನಿ ದೇವಸ್ಥಾನದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಕಳವಾಡಿ ಮಾರಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಕುಮಾರ್ ಶೆಟ್ಟಿ,ಆಭಿಜಿತ್ ಹೆಗ್ವೆ ಉಪಸ್ಥಿತರಿದ್ದರು.
ಟಿ.ಬಿ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು.ಸಂಜೀವ ಆಚಾರ್ಯ ವಂದಿಸಿದರು.
News/Giri shiruru
pic: Dottaya poojary Yadthare