ಬೈಂದೂರು; ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಇದರ ವತಿಯಿಂದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ವಕ್ಫ್ ಬೋರ್ಡ್ ನ ಲ್ಯಾಂಡ್ ಜಿಹಾದ್ ವಿರುದ್ದ ಬೃಹತ್ ಪ್ರತಿಭಟನೆ ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ನಡೆಯಿತು.
ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ ಕೇಂದ್ರ ಅನಧಿಕ್ರತ ಒತ್ತುವರಿ ನಿಯಂತ್ರಣಕಕ್ಕೆ ಕಠಿಣ ಕಾನೂನು ಕುರಿತು ಕಳೆದ ಒಂದು ವರ್ಷದಿಂದ ಜಾರಿ ಹಂತದಲ್ಲಿದೆ.ಶಾಂತಿ ಸಾಮರಸ್ಯದ ನಾಡಾಗಿದ್ದ ನಮ್ಮ ರಾಜ್ಯದಲ್ಲಿ ವಕ್ಝ ಮಂಡಳಿ ಮೂಲಕ ಸರಕಾರದ ಜಾಗ ಕಬಳಿಸುವ ಸಚಿವ ಜಮೀರ ಅಹ್ಮದ್ ಹುನ್ನಾರ ರಾಜ್ಯವನ್ನು ಕೆರಳಿಸಿದೆ ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಬಹುಸಂಖ್ಯಾತರ ನೋವನ್ನು ಪ್ರತಿಭಟನೆ ಮೂಲಕ ಎದುರಿಸಬೇಕಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ ರಾಜ್ಯ ಕಾಂಗ್ರೇಸ್ ಸರಕಾರ ಅಲ್ಪಸಂಖ್ಯಾತರ ಮತ ಪಡೆಯಲು ಬಹುಸಂಖ್ಯಾತರನ್ನು ಮಾನಸಿಕ ಭಾವನೆಗಳನ್ನು ಕೆರಳಿಸುತ್ತಿದೆ ಮಠ ಮಂದಿರ ದಲಿತರ ಆಸ್ತಿ ಕಬಳಿಸುವ ಹುನ್ನಾರ ಎಂದರು.
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪ ಕುಮಾರ್ ಶೆಟ್ಟಿ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತ್ರತ್ವದಲ್ಲಿ ರಾಜ್ಯದ ಪ್ರತಿ ಮಂಡಲದಲ್ಲೂ ಸರಕಾರದ ವಚನ ಹಿಂದು ವಿರೋದಿ ನೀತಿ ಹಾಗೂ ವಕ್ವ್ ಬೋರ್ಡ್ ಹೆಸರಲ್ಲಿ ದಲಿತರ ಬಡವರ ಸರಕಾರದ ಭೂಮಿ ಕಬಳಿಸುವ ವಿರುದ್ದ ಪ್ರತಿಭಟನೆ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ರೋಹಿತ್ ಕುಮಾರ್ ಶೆಟ್ಟಿ,ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು,ಮಹೇಂದ್ರ ಪೂಜಾರಿ,ಉಮೇಶ ಕಲ್ಗದ್ದೆ,ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ಯಾಮಲ ಕುಂದರ್,ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ಭಾಗೀರಥಿ ಸುರೇಶ್, ಜಿಲ್ಲಾ ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿತಾ ಅರ್.ಕೆ,ಹಿರಿಯರಾದ ಡಾ.ಅತುಲ್ ಕುಮಾರ್ ಶೆಟ್ಟಿ,ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ ಹಾಗೂ ಬಿಜೆಪಿ‌ ಮುಖಂಡರು ಹಾಜರಿದ್ದರು.
ಬಳಿಕ ಬೈಂದೂರು ತಹಶಿಲ್ದಾರ ಪ್ರದೀಪ್ ಅರ್ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

9 − three =

You missed