ಶಿರೂರು; ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿರೂರು ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನ ನೂತನ ಗರ್ಭಗುಡಿಯ ನಿಧಿ ಕುಂಭ ಸ್ಥಾಪನೆ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ನಡೆಯಿತು.ತಂತ್ರಿಗಳಾದ ವೇ.ಮೂ ರಾಮಚಂದ್ರ ಭಟ್ ಶಿರಾಲಿ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಹಾಗೂ ನಿಧಿ ಕುಂಭ ಸ್ಥಾಪನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣಪತಿ ಎಸ್.ಮೊಗೇರ್,ಡಾ.ಜಿ.ಶಂಕರ ಸಹೋದರ ಶಿವಣ್ಣ,ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ ಎನ್.ಮೊಗೇರ್ ಅಳ್ವೆಗದ್ದೆ,ಮಾಜಿ ಅಧ್ಯಕ್ಷರಾದ ಅಕ್ಷಯ ನಾರಾಯಣ ಶ್ರೀನಿವಾಸ,ಬೀನಾ ಮಂಕಾಳ ವೈದ್ಯ,ಶಿಲ್ಪಿ ಕೃಷ್ಣ ಮುರುಡೇಶ್ವರ,ತಿಮ್ಮಪ್ಪ ಎನ್.ಮೊಗೇರ ಅಳ್ವೆಗದ್ದೆ,ಮೊಗವೀರ ಮಹಾಜನ ಸಂಘದ ಬಗ್ವಾಡಿ ಹೋಬಳಿ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಗೌರವ ಸಲಹೆಗಾರ ಎಂ.ಎಂ.ಸುವರ್ಣ,ನಾರಾಯಣ ಚಂದನ್,ಗೌರವಾಧ್ಯಕ್ಷ ನಾರಾಯಣ ಟಿ.ಅಳ್ವೆಗದ್ದೆ,ಗ್ರಾ.ಪಂ ಸದಸ್ಯ ನಾಗೇಶ ಮೊಗೇರ್,ಬಾಬು ಮೊಗೇರ್ ಅಳ್ವೆಗದ್ದೆ,ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು,ಜೀರ್ಣೋದ್ದಾರ ಸಮಿತಿ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
News/pic: Giri Shiruru