ಬೈಂದೂರು; ಸಮೃದ್ದ ಬೈಂದೂರು ಟ್ರಸ್ಟ್ ಇದರ ವತಿಯಿಂದ ನಡೆದ ಬೈಂದೂರು ಉತ್ಸವದ ಅಂಗವಾಗಿ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿವೃದ್ದಿ ಪತ್ರಿಕೋಧ್ಯಮ -ವಾಸ್ತವ,ಸವಾಲು ಮತ್ತು ಸಾಧ್ಯತೆಗಳು ಇದರ ವಿಚಾರಗೋಷ್ಠಿ ಕಾರ್ಯಕ್ರಮ ಬೈಂದೂರು ಗಾಂಧಿ ಮೈದಾನದ ಸಭಾ ವೇದಿಕೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಹೆ ಮಣಿಪಾಲದ ಮುಖ್ಯಸ್ಥ ವರದೇಶ್ ಹಿರೇಗಂಗೆ ಇತರ ಕ್ಷೇತ್ರಗಳಂತೆ ಮಾಧ್ಯಮವೂ ಕೂಡ ಬದಲಾವಣೆಗೆ ಒಗ್ಗಿಕೊಂಡು ಮುನ್ನೆಡೆಯುತ್ತಿದೆ.ಪ್ರಚಲಿತ ಸವಾಲಿನೊಂದಿಗೆ ಪತ್ರಕರ್ತ ನಿತ್ಯ ಸೆಣಸಬೇಕಿದೆ.ಗ್ರಾಮೀಣ ಪತ್ರಿಕೋಧ್ಯಮದಲ್ಲಿ ವಿಪುಲ ಅವಕಾಶಗಳನ್ನು ಯಾವುದು ಸರಕಾರ ಗೌಪ್ಯವಾಗಿಸುತ್ತದೆ ಅದು ಸುದ್ದಿಯಾಗುತ್ತದೆ ಎನ್ನುವುದು ಮೂಲ ಅಂಶ ಎಂದರು.

ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉದಯವಾಣಿ ಉಪ ಮುಖ್ಯ ವರದಿಗಾರ ಲಕ್ಷ್ಮೀ ಮಚ್ಚಿನ,ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎಸ್.ಜನಾರ್ಧನ ಮರವಂತೆ,ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆಯೂರು,ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಶಿರೂರು ಹಾಗೂ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪತ್ರಕರ್ತ ಉದಯ ಪಡಿಯಾರ್ ಸ್ವಾಗತಿಸಿದರು.ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನೀಲ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ಪತ್ರಕರ್ತ ನರಸಿಂಹ ಬಿ.ನಾಯಕ್ ವಂದಿಸಿದರು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

6 + 15 =

You missed