ಬೈಂದೂರು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾಗಿರುವ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೈಂದೂರು ಇವರ ನೇತೃತ್ವದಲ್ಲಿ ಬೈಂದೂರು ಉತ್ಸವದ ಅಂಗವಾಗಿ ನವೆಂಬರ್ 2ರಂದು “ಅಭಿವೃದ್ಧಿ ಪತ್ರಿಕೋದ್ಯಮ – ವಾಸ್ತವ ಸವಾಲು & ಸಾಧ್ಯತೆಗಳು” ಎಂಬ ವಿಚಾರಗೋಷ್ಟಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನವೆಂಬರ್ 2ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಬೈಂದೂರಿನ ಗಾಂಧಿ ಮೈದಾನದಲ್ಲಿ ಬೈಂದೂರು ಉತ್ಸವದ ಪ್ರದಾನ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೈಂದೂರು ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ. ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ. ಉದಯವಾಣಿ ದಿನಪತ್ರಿಕೆಯ ಕುಂದಾಪುರದ ಉಪ ಮುಖ್ಯ ವರದಿಗಾರರು ಲಕ್ಷ್ಮೀ ಮಚ್ಚಿನ ಅವರು ಕರಾವಳಿ ಪತ್ರಿಕೋದ್ಯಮದ ಸವಾಲುಗಳು ವಿಚಾರವಾಗಿ ಮಾತನಾಡಲಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಸೋಸೋಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಸಂಸ್ಥೆಯ ನಿರ್ದೇಶಕರಾದ ಪ್ರೊ. ವರದೇಶ್ ಹಿರೇಗಂಗೆ ಅವರು ನವಮಾಧ್ಯಮದ ಸವಾಲು & ಸಾಧ್ಯತೆ ವಿಚಾರವಾಗಿ ವಿಷಯ ಮಂಡನೆ ಮಾಡಲಿದ್ದಾರೆ. ಬೈಂದೂರು ತಾ. ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಎಸ್. ಜನಾರ್ದನ ಮರವಂತೆ ಅವರು ಬೈಂದೂರು ಪತ್ರಿಕೋದ್ಯಮ & ಅಭಿವೃದ್ಧಿಯ ಮುನ್ನೋಟ ಎಂಬ ವಿಚಾರ ಮಂಡಿಸಲಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ರಿ. ಉಡುಪಿ ಅಧ್ಯಕ್ಷ ರಾಜೇಶ್ ಶೆಟ್ಟಿ ಶುಭಾಶಂಸನೆಗೈಯಲಿದ್ದಾರೆ ಎಂದು ಬೈಂದೂರು ತಾಲೂಕು ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್.,ಹಾಗೂ ಕಾರ್ಯದರ್ಶಿ ಅರುಣ್ ಕುಮಾರ್ ಶಿರೂರು ಜಂಟೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.