ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಯಡ್ತರೆ ಇದರ 2023-24ನೇ ಸಾಲಿನ  ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಬಂಟರಯಾನೆ ನಾಡವರ ಸಂಘ ಯಡ್ತರೆ ಬೈಂದೂರಿನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು ಅಡಿಟ್ ವರ್ಗಿಕರಣದಲ್ಲಿ ಎ ಶ್ರೇಣಿ ಪಡೆದಿದ್ದು.ವರದಿ ವರ್ಷದಲ್ಲಿ 762.59 ಕೋಟಿಗೂ ಮೀರಿ ವ್ಯವಹಾರ ನಡೆಸಿದೆ.ಪ್ರಸಕ್ತ ಸಾಲಿನಲ್ಲಿ ಸಂಘವು ರೂಪಾಯಿ 1.46 ಕೋಟಿ ಲಾಭಗಳಿಸಿದ್ದು ಸದಸ್ಯರಿಗೆ ಶೇ.17% ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದರು.

ನಿರ್ದೇಶಕರಾದ ಎಸ್. ವೆಂಕಟ ಪೂಜಾರಿ, ಕೃಷ್ಣ ದೇವಾಡಿಗ, ಗಿರೀಶ್ ಮೇಸ್ತ, ಚಿಕ್ಕು ಪೂಜಾರಿ, ವಸಂತ ಕುಮಾರ ಶೆಟ್ಟಿ, ಎನ್. ನಾಗರಾಜ ಶೆಟ್ಟಿ, ಕೃಷ್ಣ ನಾಯ್ಕ, ಶಂಕರ ನಾಯ್ಕ, ಸದಾಶಿವ ಡಿ. ಶೇರುಗಾರ್, ಟಿ. ಬಾಬು ಶೆಟ್ಟಿ, ಜ್ಯೋತಿ ಶೇರುಗಾರ್, ರಜನಿ ಶ್ಯಾನುಭಾಗ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತಾಪಚಂದ್ರ ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು ಮತ್ತು 2023-24ನೇ ಸಾಲಿನಲ್ಲಿ ಬೈಂದೂರು ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತಾಪಚಂದ್ರ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.ಮಯ್ಯಾಡಿ ಶಾಖೆಯ ವ್ಯವಸ್ಥಾಪಕ  ಕುಶಲ್ ಶೆಟ್ಟಿ ಸ್ವಾಗತಿಸಿದರು.ಸಿಬಂದಿ ಚಂದ್ರಶೇಖರ ಶೆಟ್ಟಿ ಹಾಗೂ ಕಾವ್ಯ ಕಾರ್ಯಕ್ರಮ ನಿರ್ವಹಿಸಿದರು.ಗೋಳಿಹೊಳೆ ಶಾಖೆಯ ಶಾಖಾ ವ್ಯವಸ್ಥಾಪಕ ಶಿವರಾಮ ಕೊಠಾರಿ ವಂದಿಸಿದರು.

PHOTO: DOTTAYA POOJARI YADTHARE

 

 

 

 

 

 

 

 

 

Leave a Reply

Your email address will not be published. Required fields are marked *

eleven − one =