ಬೈಂದೂರು: ರಾಷ್ಟ್ರಮಟ್ದದ ಗ್ರಾಮೀಣ ಪ್ರದೇಶದ ಯುವಜನತೆಯಲ್ಲಿ ಆತ್ಮವಿಶ್ವಾಸದ ಜೊತೆ ಸೇವಾ ಮನೋಭಾವನೆಯನ್ನು ಜೆಸಿಐ ಸಂಸ್ಥೆ ಮೂಡಿಸುತ್ತಿದೆ. ಯುವಕರಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಮಾನವೀಯತೆಯ ಮೌಲ್ಯ ರೂಪಿಸಿ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವಂತೆ ಹುರಿದುಂಬಿಸುತ್ತಿರುವುದು ಶ್ಲಾಘನೀಯ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು ಅವರು ಉಪ್ಪುಂದದಲ್ಲಿ ನಡೆಯುತ್ತಿರುವ ಜೆಸಿಐ 20ನೇ ವರ್ಷದ ಸುಮನಸು ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿಂಶತಿರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ದೇಶದ ಉನ್ನತೀಕರಣಕ್ಕೆ ಜೆಸಿಐ ಮುನ್ನಡೆ ಬರೆಯುತ್ತಿದ್ದು, ಯುವ ಪೀಳಿಗೆಯನ್ನು ಸದೃಢವಾಗಿಸುವ ಕಾರ್ಯ ಮಾಡುತ್ತಿದೆ ಎಂದರು.
ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿ ಆಲೂರು ರಘುರಾಮ ದೇವಾಡಿಗ, ಹಟ್ಟಿಯಂಗಡಿ ವಸತಿ ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ, ಉದ್ಯಮಿಗಳಾದ ಶರತ್ ಕುಮಾರ್ ಶೆಟ್ಟಿ, ನರಸಿಂಹ ದೇವಾಡಿಗ, ಲಕ್ಷ್ಮೀಕಾಂತ ಬೆಸ್ಕೂರು, ಬಿಇಒ ನಾಗೇಶ ಕೆ. ನಾಯ್ಕ್, ಹೇರಂಜಾಲು ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಮಹೇಂದ್ರ ಪೂಜಾರಿ ಯಡೇರಿ, ಉಪ್ಪುಂದ ದೇವಾಡಿಗರ ಸಂಘದ ಅಧ್ಯಕ್ಷ ರವೀಂದ್ರ ಎಚ್., ಮಾಜಿ ಅಧ್ಯಕ್ಷ ಬಿ. ಎ. ಮಂಜು ದೇವಾಡಿಗ, ಬೈಂದೂರು ಜೇಸಿಐ ಪೂವಾಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್, ಸಪ್ತಾಹ ಸಭಾಪತಿ ಗುರುರಾಜ್ ಹೆಬ್ಬಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿಕಟಪೂರ್ವಾಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಇವರಿಗೆ ಕಮಲಪತ್ರ ಪ್ರಶಸ್ತಿ, ಧರ್ಮಶ್ರೀ ರಿಲೀಫ್ ಫೌಂಡೇಶನ್ ಎಂಡಿ ನಾಗರಾಜ ಆರ್. ಸುವರ್ಣ ಇವರಿಗೆ ಸಾಧನಶ್ರೀ ಪ್ರಶಸ್ತಿ, ಪುರಂದರ ಉಪ್ಪುಂದ ಹಾಗೂ ಜಗದೀಶ ದೇವಾಡಿಗ ಇವರಿಗೆ ಯುವ ಜೇಸಿ ಪ್ರಶಸ್ತಿ ನೀಡಲಾಯಿತು ಹಾಗೂ ಅತೀ ಹೆಚ್ಚು ರಕ್ತದಾನ ಮಾಡಿದ ಮೂವರನ್ನು ಗೌರವಿಸಲಾಯಿತು.
ಉಪ್ಪುಂದ ಜೆಸಿಐ ಕಾರ್ಯದರ್ಶಿ ನರಸಿಂಹ ವಂದಿಸಿದರು.