ಬೈಂದೂರು: ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು ಇದರ ವಾರ್ಷಿಕ ಸರ್ವ ಸದಸ್ಯರ ಸಭೆ ಪ್ರಧಾನ ಕಛೇರಿ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಸದಸ್ಯರ ವಿಶ್ವಾಸ ಗಳಿಸಿ ಆರ್ಥಿಕ ಸ್ಥಿರತೆಯೊಂದಿಗೆ ಅತ್ಯುತ್ತಮ ಚಟುವಟಿಕೆ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವುದು ಸಂಘದ ಹೆಗ್ಗಳಿಕೆಯಾಗಿದೆ.ಯಶಸ್ವಿ ಇಪ್ಪತ್ತೆರಡು ವರ್ಷದ ಸಂಭ್ರಮದ ಜೊತೆಗೆ ಇನ್ನೂರ ಐವತ್ತೇಳು ಕೋಟಿಗು ಅಧಿಕ ವ್ಯವಹಾರ ನಡೆಸಿ ಪ್ರಸಕ್ತ ಸಾಲಿನಲ್ಲಿ 54.34 ಲಕ್ಷ ಲಾಭ ಗಳಿಸಿದೆ.ಸದಸ್ಯರಿಗೆ 13% ಲಾಭಾಂಶ ನೀಡಲಾಗುವುದು ಎಂದರು.ಪ್ರಧಾನ ಕಛೇರಿಗೆ ಜಾಗ ಪಡೆದುಕೊಂಡಿದ್ದು ಶೀಘ್ರ ನೂತನ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ನಿರ್ಧೇಶಕರುಗಳಾದ ಎಸ್ ರಾಜು ಪೂಜಾರಿ,ಶಂಕರ ಪೂಜಾರಿ,ಚಿಕ್ಕು ಪೂಜಾರಿ,ಕಲ್ಪನಾ ಭಾಸ್ಕರ,ಕೇಶವ ಪೂಜಾರಿ,ಶ್ರೀನಿವಾಸ ಪೂಜಾರಿ,ಜಯಸೂರ್ಯ ಪೂಜಾರಿ,ಶೇಖರ ಪೂಜಾರಿ.ಉದಯ ಜಿ ಪೂಜಾರಿ, ವೆಂಕಟೇಶ ಮಾಚ ಪೂಜಾರಿ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Reply

Your email address will not be published. Required fields are marked *

five − 4 =