ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 26ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ನಿವೃತ್ತ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ಮಾಚ ಬಿಲ್ಲವ ಮಂಗಳುಮನೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ ಸಂಘ ಸಂಸ್ಥೆಗಳ ಕ್ರಿಯಾತ್ಮಕ ಚಟುವಟಿಕೆಗಳು ಊರಿನ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.ಗಣೇಶೋತ್ಸವದ ಮೂಲಕ ಸಂಘಟನೆ ಜೊತೆಗೆ ನಿರಂತರ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿರುವುದು ಕರಾವಳಿ ಯುವಶಕ್ತಿಯ ಸಾಧನೆಯಾಗಿದೆ ಎಂದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಮಂಗಳು ಬಿಲ್ಲವ,ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು,ಉಪಾಧ್ಯಕ್ಷ ಸುರೇಶ್ ಮೊಗೇರ್,ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್, ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಮಾಧವ ಬಿಲ್ಲವ ಕಾಳನಮನೆ,ತಿಮ್ಮಪ್ಪ ಬಿಲ್ಲವ ದೇವರಹಿತ್ಲು,ಮಹಾದೇವ ಬಿಲ್ಲವ,ಮಾಜಿ ಗೌರವಾಧ್ಯಕ್ಷರಾದ ವಾಸು ಬಿಲ್ಲವ ತೆಂಕಮನೆ,ಅಣ್ಣಪ್ಪ ಮೊಗೇರ್,ಪೂರ್ವಾಧ್ಯಕ್ಷ ರವಿದಾಸ್ ಮೊಗೇರ್  ಹಾಗೂ ಯುವಶಕ್ತಿ ಸರ್ವ ಸದಸ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ಅನ್ನದಾನದ ಸೇವಾಕರ್ತರಾದ ನಾಗಪ್ಪ ಬಿಲ್ಲವ ಜಟ್ಟಜ್ಜಿಮನೆ ಯವರನ್ನು ಯುವಶಕ್ತಿ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.ಯುವಶಕ್ತಿ ಕಾರ್ಯದರ್ಶಿ ಮಹೇಶ್ ಮೊಗೇರ್ ಸ್ವಾಗತಿಸಿದರು.ಮಹೇಂದ್ರ ಬಿಲ್ಲವ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

News/Giri shiruru

Leave a Reply

Your email address will not be published. Required fields are marked *

11 − eight =