ಶಿರೂರು: ಸಂಘ ಸಂಸ್ಥೆಗಳ ಸಮಾಜಮುಖಿ ಚಿಂತನೆಗಳು ಊರಿನ ಅಭಿವ್ರದ್ದಿಯ ಪ್ರತೀಕವಾಗಿದೆ.ಜೋಗೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರತಿವರ್ಷ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಊರಿಗೆ ಹೆಮ್ಮೆಯಾಗಿದೆ.ಸಂಘಟನೆ ಮೂಲಕ ಯುವ ಸಮುದಾಯ ಜನಪರ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಾಗಲಿ.ಉತ್ಸವಗಳು ಕೇವಲ ಆಡಂಬರಕಷ್ಟೆ ಸೀಮಿತವಾಗಿರಬಾರದು.ಸಂಘಟಿತರಾಗಿ ಸಮಾಜದ ಅಭಿವೃದ್ದಿಗಾಗಿ ಉತ್ಸವಗಳು ವೇದಿಕೆಯಾಗಬೇಕು ಎಂದು ಶಿರೂರಿನ ಹಿರಿಯ ವೈದ್ಯರಾದ ಕೆ.ಪಿ ನಂಬಿಯಾರ್ ಹೇಳಿದರು ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಈಶ್ವರ ಮತ್ತು ಶಂಕರನಾರಾಯಣ ದೇವಸ್ಥಾನ ಜೋಗೂರು ಇದರ 15ನೇ ವರ್ಷದ ಗಣೇಶೋತ್ಸವ ಸಮಾರಂಭದಲ್ಲಿ ಈ ಮಾತುಗಳನ್ನಾಡಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಧುಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೈಂದೂರಿನ ಲಾವಣ್ಯ ಸಂಸ್ಥೆಯ ಹಿರಿಯ ರಂಗಕರ್ಮಿ ಗಣೇಶ ಕಾರಂತ್,ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ,ಸಾಹಿತಿ ಹಾಗೂ ನಿವೃತ್ತ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಶೆಟ್ಟಿ, ಶ್ರೀ ಈಶ್ವರ ಮತ್ತು ಶ್ರೀ ಶಂಕರ ನಾರಾಯಣ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗಗುರು ಗೋವಿಂದ ಗುರೂಜಿ ಭಟ್ಕಳ ಇವರನ್ನು ಸನ್ಮಾನಿಸಲಾಯಿತು.ಸುರೇಶ ಹಣಬ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅಣ್ಣಪ್ಪ ಜೋಗೂರು ಸ್ವಾಗತಿಸಿದರು. ರಾಜೇಶ ತೊಂಡೆಮಕ್ಕಿ ಕಾರ್ಯಕ್ರಮ ನಿರೂಪಿಸಿದರು.ರವಿ ಪೂಜಾರಿ ವಂದಿಸಿದರು.