ಬೈಂದೂರು: ಸಹಕಾರಿ ಸಂಸ್ಥೆಗಳು ಜನಸಾಮಾನ್ಯರಿಗೆ ಸರಳವಾಗಿ ಆರ್ಥಿಕ ಶಕ್ತಿ ದೊರಕಿಸಿಕೊಡುತ್ತದೆ ಗಾಂಧಿಜೀಯವರ ರಾಮ ರಾಜ್ಯದ ಕನಸು ನನಸಾಗಬೇಕಾದರೆ ಸುಸ್ಥಿರ ಸಮಾಜ ನಿರ್ಮಾಣವಾಗಬೇಕು ಈ ಸಂಸ್ಥೆಯ ಸಾಧನೆ ಬಹಳ ಉತ್ತಮ ವಾಗಿದ್ದು.ಇನ್ನಷ್ಟು ವೃದ್ದಿಸುವ ಜೊತೆಗೆ ಸಮರ್ಪಕ ಸೇವೆ ಮತ್ತು ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಅಭಿವ್ರದ್ದಿ ಸಾಧಿಸಲಿ ಎಂದು ಹೋಲಿಕ್ರಾಸ್ ಚರ್ಚಿನ ಧರ್ಮಗುರು ರೆ.ಫಾ. ವಿನ್ಸೆಂಟ್ ಕೊಯೆಲ್ಹೋ ಹೇಳಿದರು ಅವರು ಶುಕ್ರವಾರ ಉಪುಂದದಲ್ಲಿ ನಡೆದ ಹೋಲಿ-ಕ್ರಾಸ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಯ ಉಪ್ಪುಂದದಲ್ಲಿ ನೂತನ ಶಾಖೆಯನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಬೆಂಗಳೂರು ಉಡುಪಿ ಜಿಲ್ಲೆ ನಿರ್ದೇಶಕ ಮಂಜುನಾಥ್ ಎಸ್.ಕೆ.ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ನಿವೃತ್ತ ಕಿರಿಯ ಆಯೋಗದ ಅಧಿಕಾರಿ ವೆಂಕಟೇಶ ಪೂಜಾರಿ ವ್ಯವಹಾರ ವಿಭಾಗವನ್ನು ಉದ್ಘಾಟಿಸಿದರು.
ಹೋಲಿಕ್ರಾಸ್ ಸೊಸೈಟಿ ಅಧ್ಯಕ್ಷರಾದ ಡೇನಿಯಲ್ ನಜ್ರತ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಹೋಲಿ-ಕ್ರಾಸ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜ್ಯೋತಿ,ನಿವೃತ್ತ ಬ್ಯಾಂಕ್ ಆಫ್ ಬರೋಡಾ ಉದ್ಯೋಗಿ ರಘುರಾಮ ಶೆಟ್ಟಿ, ಉಪ್ಪುಂದ ಗ್ರಾ.ಪಂ ಅಧ್ಯಕ್ಷ ಮೋಹನಚಂದ್ರ ಉಪ್ಪುಂದ,ಹೋಲಿಕ್ರಾಸ್ ಚರ್ಚಿನ ಉಪಾಧ್ಯಕ್ಷ ಸ್ಟೀಫನ್ ಡಯಾಸ್.,ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕಾಮರ್ಸ್, ಎಸ್.ಕೆ.ವಿ.ಎಂ.ಎಸ್. ಜಿ.ಎಫ್.ಜಿ.ಸಿ ಕೋಟೇಶ್ವರದ ಮನೋಹರ್ ಬಿ.ಉಪ್ಪುಂದ,ಸಂಸ್ಥೆಯ ಉಪಾಧ್ಯಕ್ಷ ವಿಲ್ರೆಡ್ ಗೋಮ್ಸ್, ಸೌಹಾರ್ಧ ಸಹಕಾರಿ ಅಭಿವೃದ್ದಿ ಅಧಿಕಾರಿ ವಿಜಯ್ ಬಿ.ಎಸ್.,ಕಟ್ಟಡದ ಮಾಲಕ ಬಾಬು ಗಾಣಿಗ,ಉಪ್ಪುಂದ ಶಾಖಾ ವ್ಯವಸ್ಥಾಪಕ ಉದಯ,ಸಂಸ್ಥೆಯ ನಿರ್ದೇಶಕರು ಹಾಗೂ ಸಂಸ್ಥೆಯ ಸಿಬಂದಿಗಳು ಹಾಜರಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲಿಯಂ ಗೋಮ್ಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಿಬಂದಿ ಅಶ್ವಿನಿ ಸಂಘದ ವರದಿ ವಾಚಿಸಿದರು.ಸಂದ್ಯಾ ಸ್ವಾಗತಿಸಿದರು. ಸಿಬಂದಿ ಅನುರಾಧಾ ಕಾರ್ಯಕ್ರಮ ನಿರ್ವಹಿಸಿದರು.ಪ್ರೇಸಿಲ್ಲಾ ಲೋಬೋ ವಂದಿಸಿದರು.
News/pic: Giri shiruru