ಬೈಂದೂರು: ಸಹಕಾರ ಇಲಾಖೆಯಲ್ಲಿ ಕಳೆದ 36 ವರ್ಷಗಳಿಂದ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಎಸ್.ವಿ ಹಾಗೂ ಪತ್ನಿ ಜಯಲಕ್ಷ್ಮಿ ರವರನ್ನು ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಬೈಂದೂರು ಇದರ ವತಿಯಿಂದ ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಗೋಪಾಲ್ ಪೂಜಾರಿ, ನಿರ್ದೇಶಕರುಗಳಾದ ಎಸ್ ರಾಜು ಪೂಜಾರಿ, ಕೆ.ಶಂಕರ್ ಪೂಜಾರಿ, ಚಿಕ್ಕು ಪೂಜಾರಿ, ಕೆ .ಶ್ರೀನಿವಾಸ್ ಪೂಜಾರಿ, ಕಲ್ಪನಾ ಭಾಸ್ಕರ್,ಜಯಸೂರ್ಯ ಪೂಜಾರಿ, ಉದಯ್ ಜಿ.ಪೂಜಾರಿ, ಶೇಖರ್ ಪೂಜಾರಿ ನಾಗೂರು,ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಬಿ ಪೂಜಾರಿ,ಸಂಸ್ಥೆಯ ಶಾಖ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.