ಬೈಂದೂರು: ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶ ನೀಡಬೇಕೆನ್ನುವ ಉದ್ದೇಶದಿಂದ ಇಂತಹ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ನೀಡುವ ಜೊತೆಗೆ ಹೊಸ ಚಿಂತನೆ ಆರಂಭಿಸಿರುವುದು ಶ್ಲಾಘನೀಯವಾಗಿದೆ.ಕಷ್ಟ ಅನುಭಿಸಿದವರಿಗೆ ಮಾತ್ರ ನೋವಿನ ಅರ್ಥ ಗೊತ್ತಿರುತ್ತದೆ ತಾನು ಪಟ್ಟ ಕಷ್ಟ ಇತರರು ಅನಯಭವಿಸಬಾರದು ಎನ್ನುವ ಉದ್ದೇಶದಿಂದ ನೂರಾರು ಸಮಾಜಮುಖಿ ಸೇವೆ ನಡೆಸುತ್ತಿರುವ ಗೋವಿಂದ ಬಾಬು ಪೂಜಾರಿಯವರ ಪ್ರಯತ್ನ ಶ್ಲಾಘನಿಯವಾಗಿದೆ.ಸರಕಾರದಿಂದ ದೊರೆಯುವ ಅವಕಾಶಕ್ಕೆ ಮುಕ್ತ ಸಹಕಾರ ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ  ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು ಅವರು ಶನಿವಾರ ಹೇರಂಜಾಲಿನಲ್ಲಿ ನಡೆದ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಮಾಲೀಕತ್ವದ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೆಟ್ ಲಿ. ಇದರ ವತಿಯಿಂದ ಹೇರಂಜಾಲಿನಲ್ಲಿ ನೂತನವಾಗಿ ನಿರ್ಮಾಣಗೊಂಡಡ ಚಿಕ್ಕಿ, ಚಕ್ಕುಲಿ ಹಾಗೂ ಇತರೆ ಖಾದ್ಯಗಳ ಉತ್ಪಾದನ ಘಟಕ ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಗೌರಿಗದ್ದೆ ಆಶ್ರಮದ ಅವಧೂತ  ಶ್ರೀ ವಿನಯ್ ಗುರೂಜಿ ಮಾತನಾಡಿ ಒಳ್ಳೆಯ ಮನಸ್ಸಿರುವವರಿಗೆ ಮತ್ರ ಒಳ್ಳೆಯ ಕೆಲಸ ಮಾಡಲು ಸಾಧ್ಯ ಮಹಿಳೆಯರಿಗೆ ಉದ್ಯೋಗ ಅವಕಾಶ ದೊರೆತಾಗ ಸ್ವಾವಲಂಬನೆಯ ಜೊತೆಗೆ ಕುಟುಂಬ ಕೂಡ ನೆಮ್ಮದಿ ಕಾಣುತ್ತದೆ.ನೂರಾರು ಸಮಾಜಮುಖಿ ಸೇವೆ,ಸಾವಿರಾರು ಜನರಿಗೆ ಉದ್ಯೋಗ ಬಡವರ ಪರ ನಿಲ್ಲುವ ಚಿಂತನೆ ದೇವರಿಗೆ ಪ್ರಿಯವಾಗುತ್ತದೆ.ಉಳ್ಳವರಿಗೆಲ್ಲಾ ಕೊಡುವ ಮನಸ್ಥಿತಿ ಇರೋದಿಲ್ಲಾ ದಾನ ನೀಡುವವರು ಕೂಡ ಕೊಡುವ ಮನಸ್ಥಿತಿ ಮುಖ್ಯವಾಗಿರುತ್ತದೆ.ಗ್ರಾಮೀಣ ಭಾಗದಲ್ಲಿ ಇವರ ಪ್ರಯತ್ನ ಪ್ರಶಂಸನೀಯವಾಗಿದೆ ಎಂದರು.

ಶೆಫ್‌ಟಾಕ್ ನ್ಯೂಟ್ರಿಫುಡ್ಸ್ ಪ್ರೈವೆಟ್ ಲಿ.ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ರಿ. ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕ ಮಾತನಾಡಿ ನಾನು ಕಂಡ ಕನಸಿನಂತೆ ಅಸಕ್ತರಿಗೆ ಸಹಾಯ, ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಈ ಉದ್ಯಮ ಸ್ಥಾಪಿಸಲು ಪ್ರಮುಖ ಕಾರಣ, ಎಲ್ಲರ ಸಹಕಾರದಿಂದ ಇನ್ನಷ್ಟು ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಕೋಟ  ಶ್ರೀನಿವಾಸ ಪೂಜಾರಿ,ಕಿರಣ್ ಕುಮಾರ್ ಕೊಡ್ಗಿ, ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ ದೇವಾಡಿಗ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ,ಮರವಂತೆ ಬಡಾಕೆರೆ ವ್ಯ.ಸೇ. ಸಹಕಾರಿ ಸಂಘದ ನಾವುಂದ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾ.ಪಂ. ಮಾಜಿ ಸದಸ್ಯ ಎಚ್. ವಿಜಯ ಶೆಟ್ಟಿ ,ಬೇಕರಿ ಉತ್ಪನ್ನಗಳ ಉಡುಪಿ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಕುಲಾಲ್,ಜಿ.ಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ,ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್,ಸಂಸದ ಕೋಟ ಶ್ರೀನಿವಾಸ ಪೂಜಾರಿ ಯವರನ್ನು ಸಮ್ಮಾನಿಸಲಾಯಿತು,ಸಂಸ್ಥೆಯ ವತಿಯಿಂದ ಆಸಕ್ತರಿಗೆ ಸಹಾಯಧನ ಹಾಗೂ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಶಿಕ್ಷಕ ಸುಬ್ರಹ್ಮಣ್ಯ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಪೂರ್ಣಿಮಾ ಆಚಾರ್ಯ  ವಂದಿಸಿದರು.ಸಂಸ್ಥೆಯ ನಾಗರಾಜ ಪಿ.ಯಡ್ತರೆ ಸಹಕರಿಸಿದರು.

News/pic: Giri shiruru

 

 

Leave a Reply

Your email address will not be published.

2 × two =