ಬೈಂದೂರು: ಆಧುನಿಕತೆಯ ಬೆಳವಣಿಗೆಯಲ್ಲಿ ರಂಗಭೂಮಿ ಸುಧಾರಿತ ಅವಲಂಬನೆಯ ನಡುವೆ ಲಾವಣ್ಯದಂತಹ ಸಂಸ್ಥೆ ತನ್ನ ಸಿದ್ದಾಂತಗಳಲ್ಲಿ ರಾಜಿ ಮಾಡಿಕೊಳ್ಳದೆ ರಂಗಭೂಮಿಯ ಮೂಲ ಆದರ್ಶಗಳನ್ನು ಪಾಲಿಸಿಕೊಂಡು ನಡೆದು ಬಂದ ರೀತಿ ಅನನ್ಯವಾಗಿದೆ.ಲಾವಣ್ಯ ಸಂಸ್ಥೆ ಬೈಂದೂರಿನ ಸಾಂಸ್ಕ್ರತಿಕ ಹಿರಿಮೆಯನ್ನು ಜಗದಗಲ ಪಸರಿಸಿದ ಸಾಧನೆ ಹೊಂದಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಇದರ ಉಡುಪಿ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು ಅವರು ಲಾವಣ್ಯ(ರಿ.)ಬೈಂದೂರು ಇದರ ವತಿಯಿಂದ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ 47ನೇ ವಾರ್ಷಿಕೋತ್ಸವದ ರಂಗಪಂಚಮಿ -2024 ಐದು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು.
ಸಮೃದ್ಧ ಬೈಂದೂರು ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ ಶುಭಶಂಸನೆಗೈದರು
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್, ಪ್ರಥಮ ದರ್ಜೆ ಗುತ್ತಿಗೆದಾರ ಗೋಕುಲ ಶೆಟ್ಟಿ ಉಪ್ಪುಂದ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ. ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ,ಮೌರಿಕಾರ ಶೇಷ ದೇವಾಡಿಗ ಹಾಗೂ ಸಮಾಜ ಸೇವಕ ಶೇಖ್ ಫಯಾಜ್ ಅಲಿ ಇವರನ್ನು ಲಾವಣ್ಯ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಗಣಪತಿ ಎಸ್. ಸ್ವಾಗತಿಸಿದರು.ಶ್ರೀಧರ ವಸ್ರೆ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ಹರೇಗೋಡು ವಿಶ್ವನಾಥ ಆಚಾರ್ಯ ವಂದಿಸಿದರು. ನಂತರ ಉಡುಪಿ ಕಲಾಮಯಂ ತಂಡದ ಸದಸ್ಯರಿಂದ ಜಾನಪದ ವೈವಿಧ್ಯ ಪ್ರದರ್ಶನಗೊಂಡಿತು.