ಶಿರೂರು: ಶಿರೂರು ಟೋಲ್ ಗೇಟ್ ನಲ್ಲಿ ಕಳೆದ ಹಲವು ಸಮಯದಿಂದ ಬೇಡಿಕೆಯಿರುವ ವಿಐಪಿ ಹಾಗೂ ಆಂಬ್ಯುಲೆನ್ಸ್ ಮಾರ್ಗ ಬದಲಾವಣೆ ಶುಕ್ರವಾರದಿಂದ ಆರಂಭಗೊಂಡಿದೆ.ಈ ಹಿಂದೆ ಟೋಲ್ ಗೇಟ್‌ನ ಎರಡು ಬದಿಯಲ್ಲಿ ಆಂಬ್ಯುಲೆನ್ಸ್ ಸಂಚಾರಕ್ಕೆ ಮಾರ್ಗ ನಿಗದಿಯಾಗಿತ್ತು.ಇದರಿಂದಾಗಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಅಫಘಾತವಾಗುವ ಸಾದ್ಯತೆಯಿದೆ ಮತ್ತು ಆಂಬ್ಯುಲೆನ್ಸ್ ಚಾಲಕರಿಗೆ ಸಮಸ್ಯೆಯಾಗುತ್ತದೆ.ಹೀಗಾಗಿ ಲೈನ್ ಒಂದರಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಂಬ್ಯುಲೆನ್ಸ್ ಚಾಲಕ ಮಾಲಕರು ಮನವಿ ನೀಡಿದ್ದರು.ಮನವಿ ಸ್ಪಂಧಿಸಿದ ಟೋಲ್ ವ್ಯವಸ್ಥಾಪಕರು ಲೇನ್ ಒಂದರಲ್ಲಿ ವಿಐಪಿ ಹಾಗೂ ಆಂಬ್ಯುಲೆನ್ಸ್ ಮತ್ತು ತುರ್ತು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಈ ಸಂಧರ್ಭದಲ್ಲಿ ಟೋಲ್ ವ್ಯವಸ್ಥಾಪಕರನ್ನು ಅಂಬ್ಯುಲೆನ್ಸ್ ಚಾಲಕರ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಟೋಲ್ ವ್ಯವಸ್ಥಾಪಕ ರಾಜನ್ ನಾಯರ್,ಟೋಲ್ ಇನ್‌ಚಾರ್ಜ್ ಯೋಗೇಶ್ ಗೌಡ,ಆಂಬ್ಯುಲೆನ್ಸ್ ಉಪಾಧ್ಯಕ್ಷ ಅಮಾನುಲ್ಲಾ ಶೇಖ್,ಅಮುಲ್ ಬೋಚ್ರೆ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಟೋಲ್ ಸಿಬಂದಿ ದೀಪಕ್ ಕುಮಾರ್ ಶೆಟ್ಟಿ,ಬಾಬು ಮೊಗೇರ್,ಮಂಗಳು ಬಿಲ್ಲವ,ಲೈಪ್‌ಕೇರ್ ಸಿಬಂದಿ ವಿನಾಯಕ,ಮಂಜು ಭಟ್ಕಳ ಹಾಗೂ ಟೋಲ್ ಸಿಬಂದಿಗಳು ಹಾಜರಿದ್ದರು.