ಬೈಂದೂರು; ಕಂದಾಯ ಇಲಾಖೆ,ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ,ತಾಲೂಕು ಆಡಳಿತ ಬೈಂದೂರು ಇದರ ವತಿಯಿಂದ ಹೋಬಳಿ ಮಟ್ಟದ ಗ್ಯಾರಂಟಿ ಸಮಾವೇಶದ ಕುರಿತು ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿ ನೀಡದೆ ಅಧಿಕಾರಿಗಳು ಕೇವಲ ಕಾಟಾಚಾರಕ್ಕಾಗಿ ಕಾರ್ಯಕ್ರಮ ಆಯೋಜಿಸಿರುವುದನ್ನು ಖಂಡಿಸಿ ಸಾರ್ವಜನಿಕರು ಗರಂ ಆದ ಘಟನೆ ಸೋಮವಾರ ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆದದಿದೆ.
ಕಂದಾಯ ಇಲಾಖೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ದೊರೆಯಬೇಕೆನ್ನುವ ಉದ್ದೇಶದಿಂದ ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸಿತ್ತು ಅದರಂತೆ ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಆಯೋಜಿಸುವ ತರಾತುರಿಯಲ್ಲಿ ಜನಪ್ರತಿನಿಧಿಗಳಿಗೆ,ಸಾರ್ವನಿಕರಿಗೆ ಹಾಗೂ ಸ್ಥಳೀಯ ನಾಯಕರುಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.ಮಾತ್ರವಲ್ಲದೆ ಸದುದ್ದೇಶದಿಂದ ಅನುಷ್ಠಾನಕ್ಕೆ ತಂದಿರುವ ಯೋಜನೆಗಳು ಸಾರ್ವಜನಿಕರಿಗೆ ತಲುಪಬೇಕಾದರೆ ಅಧಿಕಾರಿಗಳ ಇಚ್ಚಾಶಕ್ತಿ ಮತ್ತು ಕರ್ತವ್ಯ ಬದ್ದತೆ ಬಹಳ ಮುಖ್ಯವಾಗಿರುತ್ತದೆ.ಬೈಂದೂರು ತಾಲೂಕು ಆಡಳಿತದ ಗ್ಯಾರಂಟಿ ಸಮಾವೇಶದಲ್ಲಿ ಬಹುತೇಕ ಅಧಿಕಾರಿಗಳು ಕೂಡ ಗೈರಾಗಿದ್ದಾರೆ.ಸಾರ್ವಜನಿಕರು ಮಾಹಿತಿ ಇಲ್ಲದ ಕಾರಣ ಜನರ ಸಂಖ್ಯೆ ಕೂಡ ಕಡಿಮೆ ಇದೆ.ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಗಳು ಕೂಡ ಅನೇಕರು ಗೈರಾಗಿದ್ದಾರೆ.ಹಾಗಿದ್ದ ಮೇಲೆ ಮಾಹಿತಿ ನೀಡುವರು ಯಾರು ಎಂದು ಪ್ರಶ್ನಿಸಿದರು.ಇದರಿಂದಾಗಿ ಸುಮಾರು ಒಂದು ಗಂಟೆ ವಿಳಂಬವಾಗಿ ಸಮಾವೇಶ ನಡೆಯಿತು.ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೈಂದೂರು ತಹಶೀಲ್ದಾರರ ಪ್ರದೀಪ್ ಆರ್ ಯಾವ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಗೈರಾಗಿದ್ದಾರೆ ಅವರಿಗೆ ಈ ಕೂಡಲೇ ನೋಟಿಸ್ ನೀಡಲಾಗುವುದು ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಮತ್ತು ಸಮಗ್ರ ವಿವರದೊಂದಿಗೆ ಸದ್ಯದಲ್ಲೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕುರಿತು ತಿಳಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಶು ಕಲ್ಯಾಣ ಅಧಿಕಾರಿ ಅನುರಾಧಾ,ಬೈಂದೂರು ಮೆಸ್ಕಾಂ ಇಲಾಖೆಯ ಹರೀಶ್,ಪಟ್ಟಣ ಪಂಚಾಯತ್ ಅಧಿಕಾರಿ ಸೂರ್ಯಕಾಂತ ಖಾರ್ವಿ,ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಶೋಕ್,ಬೈಂದೂರು ಠಾಣಾಧಿಕಾರಿ ತಿಮ್ಮೇಶ ಬಿ.ಎನ್,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ,ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ,ಉಪನ್ಯಾಸಕ ವಿನೋದ್ ಉಪಸ್ಥಿತರಿದ್ದರು.
ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಸ್ವಾಗತಿಸಿದರು.ಶಿಕ್ಷಕ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.