ಬೈಂದೂರು: ಗಣೇಶೋತ್ಸವ ಸಂಘಟನಾತ್ಮಕ ಚಿಂತನೆಯ ಹಿನ್ನಲೆ ಹೊಂದಿದೆ.ಉತ್ಸವಗಳು ಊರಿಗೆ ಶ್ರೇಯಸ್ಸು ನೀಡುತ್ತದೆ.ಗ್ರಾಮೀಣ ಭಾಗವಾದ ಹೊಸೂರು ಅತ್ಯುತ್ತಮ ಪ್ರತಿಭಾವಂತರನ್ನು ಹೊಂದಿದೆ.ಹಿರಿಯರ ಸಹಕಾರ ಇದ್ದಾಗ ಯುವ ಸಮುದಾಯ ಇನ್ನಷ್ಟು ಹೊಸತನದ ಕಾರ್ಯಕ್ರಮ ರೂಪಿಸಲು ಸಾಧ್ಯ ಎಂದು
ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆನಂದ ಮದ್ದೋಡಿ ಹೇಳಿದರು ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೊಸೂರು ಇದರ 15ನೇ ವರ್ಷದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಸವಿತಾ ದಿನೇಶ್ ಗಾಣಿಗ,ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕ ಮಹಾಬಲೇಶ್ವರ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ನಾಗಪ್ಪ ಮರಾಠಿ,ಮಾಜಿ ಗ್ರಾ.ಪಂ ಸದಸ್ಯ ಉದಯ ಮಾಕೋಡಿ,ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಜನಾರ್ಧನ ಪೂಜಾರಿ,ಕಾರ್ಯದರ್ಶಿ ರಾಜೇಶ ಪೂಜಾರಿ ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಮರಾಠಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರಾಜು ಮರಾಠಿ ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.ವಾಸು ಮರಾಠಿ ವಂದಿಸಿದರು.