ಶಿರೂರು: ಪಾತಿ ದೋಣಿಯ ಮೀನುಗಾರಿಕೆಗೆ ತೆರಳಿದ ಮೀನುಗಾರ ಹಿಂದಿರುಗುವಾಗ ದಡದ ಬಳಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಶಿರೂರು ಅಳ್ವೆಗದ್ದೆಯಲ್ಲಿ ನಡೆದಿದೆ.ಇಲ್ಲಿನ ಅಳ್ವೆಗದ್ದೆ ನಿವಾಸಿ ವೆಂಕಟರಮಣ ದುರ್ಗಪ್ಪ ಮೊಗೇರ್(65) ಮುಂಜಾನೆ ಐದು ಗಂಟೆಗೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು ಹಿಂದಿರುವಾಗ ದಡದ ಬಳಿ ನೀರಿಗೆ ಬಿದ್ದಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.ಮೃತರು ಪತ್ನಿ,ಓರ್ವ ಗಂಡು ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

 

Leave a Reply

Your email address will not be published.

4 + nineteen =