ಬೈಂದೂರು: ಬೈಂದೂರು ತಾಲೂಕು ರೈತ ಸಂಘ, ಸಾಂಪ್ರದಾಯಿಕ ಕಂಬಳ ಸಮಿತಿ ಬೈಂದೂರು ಹಾಗೂ ಊರಿನ ಗ್ರಾಮಸ್ಥರಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಬೈಂದೂರು ಕಂಬಳ ಹಾಗೂ ರೈತರ ಸಮಾಗಮ ಕಾರ್ಯಕ್ರಮ ಗಂಗನಾಡು ಸಮೀಪದ ಕ್ಯಾರ್ತೂರು ಕಂಬಳ ಗದ್ದೆಯಲ್ಲಿ ನಡೆಯಿತು.
ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ರಾಜ್ಯ ಮಟ್ಟದ ಹೊನಲು ಬೆಳಕಿನ ಬೈಂದೂರು ಕಂಬಳವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಂಬಳಗಳು ಕೃಷಿಯನ್ನೆ ನಂಬಿಕೊಂಡಿರುವ ರೈತರ ಸಂಭ್ರಮವಾಗಿದೆ.ಹಲವು ತಲೆಮಾರುಗಳ ಹಿನ್ನೆಲೆ ಹೊಂದಿರುವ ಕಂಬಳಗಳು ಧಾರ್ಮಿಕ ಪರಂಪರೆಯ ಜೊತೆಗೆ ಸಾಂಸ್ಕ್ರತಿಕ ಶ್ರೀಮಂತಿಕೆಯ ಅನಾವರಣಗೊಂಡಿದೆ.ಬೈಂದೂರು ಕಂಬಳದ ಮೂಲಕ ಗ್ರಾಮೀಣ ಭಾಗದಲ್ಲಿ ಅದ್ದೂರಿಯ ಸಾಂಸ್ಕ್ರತಿಕ ವೈಭವ ಸಾಕಾರಗೊಳಿಸಿದೆ.ಈ ಮೂಲಕ ಬೈಂದೂರು ಕಂಬಳ ರಾಜ್ಯಮಟ್ಟದಲ್ಲೆ ಪ್ರಶಂಸೆಗೆ ಪಾತ್ರವಾಗಿದೆ.ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ಮಹತ್ವಕಾಂಕ್ಷೆಯ ಯೋಜನೆಗಳು ಸಾಕಾರಗೊಂಡಿದ್ದು ಕೊಲ್ಲೂರು ಕೇಬಲ್ ಕಾರ್,ಏತ ನೀರಾವರಿ,ಗ್ರಾಮೀಣ ಭಾಗದಲ್ಲಿ ಮೊಬೈಲ್ ಟವರ್,ಪ್ರವಾಸೋಧ್ಯಮ ಅಭಿವೃದ್ದಿ,ಬೈಂದೂರು -ರಾಣಿಬೆನ್ನೂರು ಹೆದ್ದಾರಿ ಸೇರಿದಂತೆ ಬೈಂದೂರು ಕ್ಷೇತ್ರಕ್ಕೆ ವಿಶೇಷ ದಾಖಲೆಯ ಅನುದಾನ ದೊರಕಿಸಿಕೊಟ್ಟ ಸಂತೃಪ್ತಿಯಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬೈಂದೂರು ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಲೋಕಸಭೆಗೆ ಸೇರಿರುವುದು ಈ ಭಾಗದ ಜನರ ಅದೃಷ್ಟವಾಗಿದೆ.ಹೀಗಾಗಿ ಬಿ.ವೈ ರಾಘವೇಂದ್ರ ನಮ್ಮ ಸಂಸದರಾಗಿರುವ ಜೊತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಕೊಡುಗೆ ಈ ಕ್ಷೇತ್ರಕ್ಕೆ ಅಪಾರವಾಗಿದೆ ಮತ್ತು ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಸಹಕಾರ ದೊರೆತು ಅಭಿವೃದ್ದಿಯ ವೇಗ ದೊರಕಿಸಿಕೊಟ್ಟಿದೆ ಎಂದರು.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಬೈಂದೂರು ತಾಲೂಕು ರೈತ ಸಂಘ ನಿರಂತರವಾಗಿ ಈ ಭಾಗದ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ.ಈ ಬಾರಿ ಅದ್ದೂರಿಯ ಬೈಂದೂರು ಕಂಬಳ ಆಯೋಜಿಸುವುದರ ಮೂಲಕ ರೈತರ ಸಮಾಗಮದ ಜೊತೆಗೆ ಬೈಂದೂರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ.ರೈತರ ಸಮಾಗಮದ ಜೊತೆಗೆ ಗ್ರಾಮೀಣ ಭಾಗದ ರೈತರ ಸಂಘಟನೆ ಮಾದರಿಯಾಗಿದೆ.ಕ್ಷೇತ್ರದ ಅಭಿವೃದ್ದಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ರವರ ಕೊಡುಗೆ ವಿಶೇಷ ಶಕ್ತಿಯಾಗಿದೆ.ಈ ಮೂಲಕ ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತು ರೈತರ ಅಭಿವೃದ್ದಿಗೆ ವಿಶೇಷ ಕೊಡುಗೆ ನೀಡಿ ಕಂಬಳೋತ್ಸವಕ್ಕೆ ಚಾಲನೆ ನೀಡಿರುವುದು ಬೈಂದೂರಿನ ಹೆಮ್ಮೆಯಾಗಿದೆ ಮತ್ತು ಸಹಕರಿಸಿದ ಸಮಸ್ತ ಬೈಂದೂರು ಜನತೆಗೆ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಅಭಿವಂದನೆಗಳು.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಟ್ರೋಪಿ ಅನಾವರಣಗೊಳಿಸದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಜಯಶೀಲ ಶೆಟ್ಟಿ ಘಟಪ್ರಭ,ಚೆಫ್‌ಟಾಕ್ ಪುಡ್ ಸಂಸ್ಥೆಯ ಮ್ಯಾನೆಜಿಂಗ್ ಡೈರಕ್ಟ್‌ರ್ ಗೋವಿಂದ ಬಾಬು ಪೂಜಾರಿ,ಜಿ.ಗೋಕುಲ ಶೆಟ್ಟಿ,ಅತ್ಯಾಡಿ ಚರ್ಚ ಧರ್ಮಗುರು ಸನ್ನಿ .ಪಿ ಜೋನ್,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಅಶೋಕ ಶೆಟ್ಟಿ ಸಂಸಾಡಿ,ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಡಾ.ರವಿ ಶೆಟ್ಟಿ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಉದ್ಯಮಿ ವೆಂಕಟೇಶ ಕಿಣಿ,ಉದ್ಯಮಿ ಗೋಪಾಲಕೃಷ್ಣ ಕಲ್ಮಕ್ಕಿ,ಬಾಜಪ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ,ಉದ್ಯಮಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಸಾಮ್ರಾಟ್ ಶೆಟ್ಟಿ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ಗ್ರಾ.ಪಂ ಮಾಜಿ ಅಧ್ಯಕ್ಷೆ ಭಾಗೀರಥಿ ಸುರೇಶ್,ಬೈಂದೂರು ವಲಯ ಮರಾಠಿ ಸಂಘದ ಅಧ್ಯಕ್ಷ ಭೋಜ ನಾಯ್ಕ,ಶ್ರೀ ನರಸಿಂಹ ದೇವಸ್ಥಾನ ಕ್ಯಾರ್ತೂರು ಅಧ್ಯಕ್ಷ ಬಡಿಯ ಗೊಂಡ,ಮಾಜಿ ಅಧ್ಯಕ್ಷ ಮಾಸ್ತಿ ಗೊಂಡ,ರಮೇಶ ಗೊಂಡ,ದಿವಾಕರ ಶೆಟ್ಟಿ ಶಿವಮೊಗ್ಗ,ಈಶ್ವರ ಗೊಂಡ,ಬಾರ್ಕೂರು ಶಾಂತಾರಾಮ ಶೆಟ್ಟಿ,ರವಿ ಕೋಟ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ನೀಡಿದ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ,ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಯವರನ್ನು ಸಮ್ಮಾನಿಸಲಾಯಿತು.
ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಹಾಗೂ ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.ಉಪ್ಪುಂದ ಜೆಸಿಐ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ ವಂದಿಸಿದರು.
ಬೈಂದೂರು ಕಂಬಳದ ಫಲಿತಾಂಶ.
ಹಲಗೆ ವಿಭಾಗ ಪ್ರಥಮ :ರವಿರಾಜ್ ಶೆಟ್ಟಿ ಕೊಡ್ಲಾಡಿ
ದ್ವಿತೀಯ: ಪವನ್ ಕುಮಾರ್ ಹೊಳೆಬಲ್ -ಗಂಗೆಬಲ್
ಹಗ್ಗ ಹಿರಿಯ ಪ್ರಥಮ:ನೀಲಕಂಠ ಹುದಾರ್ ತಗ್ಗರ್ಸೆ
ದ್ವಿತೀಯ: ನೀಲಕಂಠ ಹುದಾರ್ ತಗ್ಗರ್ಸೆ
ಹಗ್ಗ ಕಿರಿಯ ಪ್ರಥಮ:ಗಣಪ ಗಂಗನಾಡು
ದ್ವಿತೀಯ:ಗಿರಿಜಾ ರೋಡ್‌ಲೈನ್ಸ್
ಸಬ್ ಜೂನಿಯರ್ ಪ್ರಥಮ:ವಿಶ್ವನಾಥ ದೇವಾಡಿಗ ಬೈಂದೂರು
ದ್ವಿತೀಯ:ಮಹಾಸತಿ ಗೊರಟೆ
News/pic: Giri Shiruru