ಬೈಂದೂರು: ಬೈಂದೂರು ತಾಲೂಕು ರೈತ ಸಂಘ, ಸಾಂಪ್ರದಾಯಿಕ ಕಂಬಳ ಸಮಿತಿ ಬೈಂದೂರು ಹಾಗೂ ಊರಿನ ಗ್ರಾಮಸ್ಥರಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಬೈಂದೂರು ಕಂಬಳ ಹಾಗೂ ರೈತರ ಸಮಾಗಮ ಕಾರ್ಯಕ್ರಮ ಜನವರಿ 07 ರಂದು ಬೈಂದೂರಿನ ಗಂಗನಾಡು ಸಮೀಪದ ಕ್ಯಾರ್ತೂರು ಕಂಬಳ ಗದ್ದೆಯಲ್ಲಿ ನಡೆಯಲಿದೆ.

ಈಗಾಗಲೇ ಕಂಬಳಕ್ಕೆ ಸಿದ್ದತೆ ನಡೆಯುತ್ತಿದ್ದು ರಾಜ್ಯಮಟ್ಟದ ಅನೇಕ ನಾಯಕರು ಆಗಮಿಸಲಿದ್ದಾರೆ.ಮೂರು ಜಿಲ್ಲೆಗಳ ರೈತರ ಸಮಾಗಮದ ಮೂಲಕ ಬೈಂದೂರಿನಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬರಲಿದೆ ಹಾಗೂ ಸಾಧಕ ಕಂಬಳದ ಓಟಗಾರರನ್ನು,ಹಿರಿಯ ರೈತರನ್ನು ಹಾಗೂ ಕಂಬಳದ ಪೋಷಕರನ್ನು ಸಮ್ಮಾನಿಸಲಾಗುವುದು.

ಕಂಬಳ ಸ್ಪರ್ಧೆಯು ಹಲಗೆ ವಿಭಾಗ ಪ್ರಥಮ ಒಂದು ಪವನ್ ಚಿನ್ನದ ಪದಕ,ದ್ವಿತೀಯ ಆರ್ಧ ಪವನ್ ಚಿನ್ನದ ಪದಕ,ಹಗ್ಗ ಹಿರಿಯ ಪ್ರಥಮ ಒಂದು ಪವನ್ ಚಿನ್ನದ ಪದಕ,ದ್ವಿತೀಯ ಆರ್ಧ ಪವನ್ ಚಿನ್ನದ ಪದಕ,ಹಗ್ಗ ಜೂನಿಯರ್ ಪ್ರಥಮ ಪ್ರಥಮ ಆರ್ಧ ಪವನ್ ಚಿನ್ನದ ಪದಕ,ದ್ವಿತೀಯ ಕಾಲು ಪವನ್ ಚಿನ್ನದ ಪದಕ,ಸಬ್ ಜೂನಿಯರ್ ಪ್ರಥಮ ಆರ್ಧ ಪವನ್ ಚಿನ್ನದ ಪದಕ ಹಾಗೂ ದ್ವಿತೀಯ ಕಾಲು ಪವನ್ ಚಿನ್ನದ ಪದಕ ನೀಡಲಾಗುವುದು ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Leave a Reply

Your email address will not be published.

thirteen + nineteen =