ಶಿರೂರು: ಭಾರತೀಯ ಶಿಕ್ಷಣ ಪದ್ದತಿ ಸಂಸ್ಕಾರ ಮತ್ತು ಸಂಸ್ಕ್ರತಿಯ ತಳಹದಿಯಲ್ಲಿದೆ. ಜ್ಞಾನದ ಶಿಕ್ಷಣ ಸಂಸ್ಥೆ ಸಂಸ್ಕ್ರತಿಯುತ ಶಿಕ್ಷಣ ನೀಡುವ ಮೂಲಕ ಕ್ಷೇತ್ರದಲ್ಲಿ ಉತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆಯುತ್ತಿದೆ.ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಿಸಿಕೊಂಡಿದೆ.ಉತ್ತಮ ಗುಣಮಟ್ಟ ಹಾಗೂ ಶಿಕ್ಷಣಾಭಿಮಾನಿಗಳ ಪ್ರೋತ್ಸಾಹ ಸಂಸ್ಥೆಯ ಪ್ರಗತಿಯನ್ನು ವೃದ್ದಿಸುತ್ತಿದೆ ಎಂದು ಜ್ಞಾನದ ಶೈಕ್ಷಣಿಕ ಸಂಸ್ಥೆ ಗೋಳಿಗುಂಡಿ ಶಿರೂರು ಆಡಳಿತ ಟ್ರಸ್ಟಿ ಸುರೇಶ್ ಅವಭೃತ ಹೇಳಿದರು ಅವರು ಜ್ಞಾನದ ಶೈಕ್ಷಣಿಕ ಸಂಸ್ಥೆ ಶಿರೂರು ಇದರ 12ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ನಾಯ್ಕ ಜ್ಞಾನದ ಟ್ರಸ್ಟ್ ನ ಉಪಾಧ್ಯಕ್ಷ ರಾಮಚಂದ್ರ ಬಿ.ಶಿರೂರಕರ್, ಕಾರ್ಯದರ್ಶಿ ಶ್ರೀಧರ್ ಅವಭೃತ, ಆಡಳಿತ ಮಂಡಳಿ ಸದಸ್ಯರಾದ ನಾರಾಯಣ ಮಾಸ್ತಿ, ಅಕ್ಷಯ್ ಶ್ರೀನಿವಾಸ್, ಲಚ್ಮಯ್ಯ ಕೆ. ಸಿದ್ದನಮನೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಕಳೆದ ಸಾಲಿನ ಶೈಕ್ಷಣಿಕ ಹಾಗೂ ಪ್ರಸ್ತುತ ವರ್ಷದ ಕ್ರೀಡಾ ಸಾಧಕರನ್ನು ಸಮ್ಮಾನಿಸಲಾಯಿತು ಹಾಗೂ 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಯಮುನಾ ವಾರ್ಷಿಕ ವರದಿ ವಾಚಿಸಿದರು.ಸುಮಂತ ಸ್ವಾಗತಿಸಿದರು.ಶಿಕ್ಷಕಿ ಮೋನಿಷಾ ಮತ್ತು ಕನ್ನಡ ಶಿಕ್ಷಕಿ ಚೈತ್ರಾ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕಿ ಪುಷ್ಪಲತಾ ವಂದಿಸಿದರು.