ಬೈಂದೂರು: ಐತಿಹಾಸಿಕ ಪ್ರಸಿದ್ದ ಬೈಂದೂರು ಹೋಲಿಕ್ರಾಸ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂದನೀಯ ಧರ್ಮಗುರು ರೋಶನ್ ಡಿಸೋಜಾ, ವಂದನೀಯ ರಾಯಲ್ ನಜ್ರೆತ್ ಹಾಗೂ ಬೈಂದೂರಿನ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೋ ರವರ ನೇತ್ರತ್ವದಲ್ಲಿ ರವಿವಾರ ರಾತ್ರಿ ಶ್ರದ್ಧಾಪೂರ್ವಕವಾಗಿ ಆಚರಿಸಿ ಸಂಭ್ರಮಿಸಿದರು.ಬೆಳಿಗ್ಗೆ ಚರ್ಚ್‌ನಲ್ಲಿ ಕ್ರೈಸ್ತ ಬಾಂಧವರಿಂದ ಪೂಜಾ ವಿಧಿ ವಿಧಾನಗಳು ನಡೆಯಿತು.ಈ ಸಂದರ್ಭದಲ್ಲಿ ನೂರಾರು ಕ್ರೈಸ್ತ ಸಮುದಾಯದ ಬಾಂಧವರು ಹಾಜರಿದ್ದರು.
ಚಿತ್ರ: ಲಾರೆನ್ಸ್ ಫೆರ್ನಾಂಡಿಸ್,ಏ.ವನ್.ಸ್ಟುಡಿಯೋ ಶಿರೂರು