ಬೈಂದೂರು: ಸ.ಹಿ.ಪ್ರಾ ಶಾಲೆ ಗಂಗಾನಾಡುವಿನಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು.ಕೆನರಾ ಫೌಂಡೇಶನ್ ಬೆಂಗಳೂರು ಇದರ ಕೆ.ಬಿ ಸುಬ್ರಹ್ಮಣ್ಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ಜಿ.ಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶಿಕ್ಷಣಾಭಿಮಾನಿಗಳು ಪ್ರೋತ್ಸಾಹ ನೀಡಿದಾಗ ಮಾತ್ರ ಸರಕಾರಿ ಶಾಲೆಗಳನ್ನು ಉತ್ತಮವಾಗಿ ಬೆಳೆಸಲು ಸಾಧ್ಯ.ಸರಕಾರ ಹಾಗೂ ಇಲಾಖೆ ಅಗತ್ಯವಿರುವ ಕಡೆ ಯೋಜನೆಗಳನ್ನು ನೀಡಿದಾಗ ಸರಕಾರಿ ಶಾಲೆಯ ಸಮಗ್ರ ಅಭಿವೃದ್ದಿ ಸಾಧ್ಯ.ಶಿಕ್ಷಕರು ಮತ್ತು ಪಾಲಕರ ಆಸಕ್ತಿ ಉತ್ತಮ ಶೈಕ್ಷಣಿಕ ವಾತಾವರಣ ರೂಪಿಸಲು ಸಾಧ್ಯ ಎಂದರು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ರಾಜು ಬಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಬಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ನಾಯ್ಕ್, ಕ ರಾ ಪ್ರಾ ಶಾ ಶಿ ಸಂಘ, ಉಡುಪಿ ಜಿಲ್ಲೆ ಹಾಗೂ ಕ ರಾ ಸ ನೌ ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ   ಶ್ರೀಕುಮಾರ್ ಮರಾಠಿ, ಅಧ್ಯಕ್ಷರು,ಬೈಂದೂರು ಸ.ಪ.ಪೂ ಕಾಲೇಜಿನ ಎಸ್.ಡಿ.ಎಮ್.ಸಿ ಅಧ್ಯಕ್ಷ ಗಣಪ ಜಿ ಮರಾಠಿ,ಶಾಲಾ ಸ್ಥಳದಾನಿಗಳಾದ ಸುಭಾಶ್ಚಂದ್ರ ಶೇರುಗಾರ್,ಉದ್ಯಮಿ ಚೆನ್ನಯ್ಯ ಪೂಜಾರಿ ಗಂಗಾನಾಡು ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಂಜುನಾಥ ಶೇರುಗಾರ್,ಸತೀಶ್ ಆಚಾರ್ಯ,ಉದ್ಯಮಿ ಪೌಲುಸ್ ಪಿಜೆ ಗಂಗನಾಡು,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಭಾಗೀರಥಿ ಮರಾಠಿ, ಶಾಲಾ ಎಸ್.ಡಿ.ಸಿ ಅಧ್ಯಕ್ಷ ರಾಜು ದೇವಪ್ಪನಡಿ,ಬೈಂದೂರು ಆರಕ್ಷಕ ಇಲಾಖೆಯ ಚಂದ್ರ ಮರಾಠಿ ಗಂಗನಾಡು,ಸಂಘಟನಾ ಕಾರ್ಯದರ್ಶಿ ಭಾಸ್ಕರ ಮರಾಠಿ, ಪೋಷಕ ಪ್ರತಿನಿಧಿ ದೇವಪ್ಪ ಹಂಡೆ,ಗಣಪತಿ ಜಿ,ರಾಘವೇಂದ್ರ ಕೆ.ಎಸ್ , ಗೌರವ ಶಿಕ್ಷಕಿ ಸುಮಿತ್ರ, ವಿದ್ಯಾರ್ಥಿ ನಾಯಕ ಶರತ್,ನಾಯಕಿ ಶ್ವೇತ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಅರ್ಚನಾ ಕನ್ನಂತ,ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಬಿಲ್ಲವ,ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.

ವಾಸು ಮರಾಠಿ ತೊಕ್ತಿ ಸ್ವಸ್ತಿವಾಚನಗೈದರು. ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಬಿಲ್ಲವ ಸ್ವಾಗತಿಸಿದರು. ಸಹಶಿಕ್ಷಕಿ ಶಾರದಾ ಹಾಗೂ ಜಿಪಿಟಿ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಗೌರಿ ವಂದಿಸಿದರು.

 

Leave a Reply

Your email address will not be published.

nine + fifteen =