ಬೈಂದೂರು: ಬೈಂದೂರು ಪ.ಪಂ ನಿಲುವು ಅವೈಜ್ಞಾನಿಕ ನಿರ್ಧಾರವಾಗಿದೆ.ಹಳ್ಳಿಗಳ ಪ್ರಮುಖ ಬೇಡಿಕೆ ಪ.ಪಂ ಬೇಡ ಎನ್ನುವ ನಿರ್ಧಾರಕ್ಕೆ ನಮ್ಮ ಪೂರ್ಣ ಸಹಮತವಿದೆ.94ಸಿ,ಆಕ್ರಮ -ಸಕ್ರಮ ಮಾತ್ರವಲ್ಲ ಎಲ್ಲಾ ರೀತಿಯಿಂದ ಗ್ರಾಮೀಣ ಭಾಗದ ಜನರು ಹೈರಾಣಾಗಿದ್ದಾರೆ.ನೀರಾವರಿ ಇಲಾಖೆಯಿಂದ ಪ.ಪಂ ವ್ಯಾಪ್ತಿ ಅವೈಜ್ಞಾನಿಕವಾಗಿದೆ ಎಂದು 42 ಕೋಟಿ ರೂಪಾಯಿ ನೀರಾವರಿ ಯೋಜನೆ ವಾಪಾಸ್ಸು ಹೋಗಿದೆ.ಹೀಗಾಗಿ ಉಪಕಾರಕ್ಕಿಂತ ಉಪದ್ರ ಅಧಿಕವಾಗಿದೆ.ಗ್ರಾಮೀಣ ಭಾಗದವರ ಅನುಕೂಲಕ್ಕಾಗಿ ಹಳ್ಳಿಗಳನ್ನು ಪ್ರತ್ಯೇಕಿಸಿ ಪ್ರತ್ಯೇಕ ಗ್ರಾಮಗಳಾದರೆ ಇನ್ನಷ್ಟು ಸಹಕಾರಿಯಾಗುತ್ತದೆ.ಇದರಲ್ಲಿ ಯಾವುದೇ ರಾಜಕೀಯವಿಲ್ಲ.ಹಳ್ಳಿಗಳ ಬೇಡಿಕೆಗೆ ನನ್ನ ಪೂರ್ಣ ಸಹಕಾರವಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಅವರು ಶನಿವಾರ ಬೈಂದೂರು ಆಡಳಿತ ಸೌಧದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಹಳ್ಳಿಗಳನ್ನು ಪ್ರತ್ಯೇಕಿಸಬೇಕು ಸಾರ್ವಜನಿಕರ ಮನವಿ ಸ್ವೀಕರಿಸಿ ಮಾತನಾಡಿದರು ಹಾಗೂ ಎಲ್ಲರೂ ಒಗ್ಗಟ್ಟಾಗಿ ಒಂದೇ ಸ್ವರದಲ್ಲಿ ಹೋರಾಡಬೇಕು ಎಂದರು.

ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಬೈಂದೂರು ಭಾಗದ ಗ್ರಾಮೀಣ ಭಾಗಗಳು ಪಟ್ಟಣ ಪಂಚಾಯತ್ ನಿರ್ಧಾರದಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿದೆ.ಹಳ್ಳಿಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಬೇರ್ಪಡಿಸುವುದು ಬಹುದಿನದ ಬೇಡಿಕೆಯಾಗಿದೆ.ಕಳೆದ ಮೂರು ವರ್ಷದಿಂದ ಪ.ಪಂ ಕಾನೂನುಗಳು ಗ್ರಾಮೀಣ ಭಾಗದ ಜನರಿಗೆ ನುಂಗಲಾರದ ತುತ್ತಿನಂತಾಗಿದೆ.ಹೀಗಾಗಿ ಹಳ್ಳಿ ಭಾಗಗಳನ್ನು ಪ್ರತ್ಯೇಕಿಸಬೇಕಾಗಿರುವುದು ಅನಿವಾರ್ಯವಿದೆ.ಇದಕ್ಕೆ ರಾಜಕೀಯ ಮರೆತು ಎಲ್ಲರೂ ಒಂದಾಗಿ ಹೋರಾಡಲು ನಮ್ಮ ಪೂರ್ಣ ಸಹಮತವಿದೆ.ನಮ್ಮೆಲ್ಲರ ಉದ್ದೇಶ ಒಂದೆ ಗ್ರಾಮೀಣ ಭಾಗಗಳು ಪ.ಪಂ ವ್ಯಾಪ್ತಿಯಿಂದ ಹೊರಬರಬೇಕಾಗಿರುವುದು ಹಳ್ಳಿ ಭಾಗದಲ್ಲಿ ಕೃಷಿಕರ ನೋವಿಗೆ ಸ್ಪಂಧಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಗ್ರಾ.ಪಂ ಸದಸ್ಯ ಜೈಸನ್ ಮದ್ದೋಡಿ,ಪ್ರಿಯದರ್ಶಿನಿ ಬೆಸ್ಕೂರು,ಭಾಗೀರಥಿ,ಮಾಲಿನಿ ಕೆ,ಕೃಷ್ಣ ದೇವಾಡಿಗ ಹಾಗೂ ಬೈಂದೂರು ಪಟ್ಟಣ ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದರು.

ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published.

8 + eighteen =