ಶಿರೂರು: ದೀಪಾವಳಿ ಹಬ್ಬದ ಪ್ರಯುಕ್ತ ಯಡ್ತರೆ ಗ್ರಾಮದ ತೂದಳ್ಳಿಯಲ್ಲಿ ನಡೆದ ತೂದಳ್ಳಿ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಶ್ರೀ ಮಹಾವಿಷ್ಣು ದೇವಸ್ಥಾನದ ಗೌರವಾಧ್ಯಕ್ಷ ಶಾಂತಾನಂದ ಶೆಟ್ಟಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.ಕ್ರೀಡಾಕೂಟದ ದಿನಗಳಲ್ಲಿ ಮಾತ್ರ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳದೆ ನಿರಂತರ ಅಭ್ಯಾಸದಿಂದ ಆರೋಗ್ಯವಂತರಾಗಿಲು ಕ್ರೀಡೆ ಸಹಕಾರಿಯಾಗಿದೆ.ಕ್ರೀಡೆಗಳು ಸಮುದಾಯದ ನಡುವೆ ಒಗ್ಗಟ್ಟು ಹಾಗೂ ಸಂಘಟನೆ ಮೂಡಿಸುತ್ತದೆ ಹಾಗೂ ಕ್ರೀಡೆಗಳು ನಮ್ಮೊಳಗೆ ಭಾಂದವ್ಯ ವೃದ್ದಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಅರುಣ್ ಕುಮಾರ್ ಶಿರೂರು, ನಾರಾಯಣ ಶೆಟ್ಟಿ,ರಾಮ ಪೂಜಾರಿ, ಮಾದೇವ ಪೂಜಾರಿ ಕಿಸ್ಮತ್ತಿ,ಉದ್ಯಮಿ ಮ್ಯಾಥ್ಯೂಕೆ .ಎಸ್,ನಾಗೇಶ ಭಂಡಾರಿ ಉದೂರು,ದೇವಸ್ಥಾನದ ಉಪಾಧ್ಯಕ್ಷ ಪಂಜು ಪೂಜಾರಿ, ಕಾರ್ಯದರ್ಶಿಗಳಾದ ಮೋಹನ್, ಗಣೇಶ್ ಆಚಾರಿ ಮೊದಲಾದವರು ಉಪಸ್ಥಿತರಿದ್ದರು.
ದಿನೇಶ ಆಚಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.