ಬೈಂದೂರು: ಬೈಂದೂರಿನಲ್ಲಿ ಪ್ರಪ್ರಥಮವಾಗಿ ನಿರ್ಮಾಣಗೊಂಡಿರುವ ಪ್ರತಿಷ್ಠಿತ ಬೈಂದೂರಿನ ಬೈಂದೂರು ಪ್ಯಾಲೇಸ್ ವಸತಿ ಸಮಚ್ಚಯವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ರವಿವಾರ ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿನೂತನ ಚಿಂತನೆಗಳಿದ್ದಾಗ ಹೊಸತನ ಕಂಡುಕೊಳ್ಳಲು ಸಾಧ್ಯ.ಗ್ರಾಮೀಣ ಭಾಗದಲ್ಲಿ ಹೊಸ ಹೊಸ ಪ್ರಯತ್ನಗಳು ಸುಲಭದ ಮಾತಲ್ಲ.ಸವಾಲುಗಳನ್ನು ಎದುರಿಸಿದಾಗ ಯಶಸ್ಸು ಸಾಧ್ಯ.ಬೈಂದೂರು ಪ್ಯಾಲೇಸ್ ಕ್ಷೇತ್ರದ ಹೆಮ್ಮೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕೆ.ವೆಂಕಟೇಶ ಕಿಣಿಯವರು ಕೇವಲ ವಯಕ್ತಿಕ ಮಾತ್ರವಲ್ಲದೆ ಊರಿನ ಅಭಿವೃದ್ದಿಗೂ ಸಹ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.ಕೊಂಕಣ ರೈಲ್ವೆ ಹೋರಾಟ ಸೇರಿದಂತೆ ಪ್ರತಿಯೊಂದರಲ್ಲೂ ಇವರ ಕೊಡುಗೆ ಅಪಾರವಾಗಿದೆ.ಬೈಂದೂರು ಪ್ಯಾಲೇಸ್ ಊರಿನ ಕೀರ್ತಿ ಮುಕುಟವಾಗಿದೆ.ಇನ್ನಷ್ಟು ಹೊಸ ಪ್ರಯತ್ನಗಳು ಬೈಂದೂರಿನ ಅಭಿವೃದ್ದಿ ದೃಷ್ಟಿಯಿಂದ ಸಾಕಾರಗೊಳ್ಳಲಿ ಎಂದರು.

ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣ ಪ್ರಸಾದ ಅಡ್ಯಂತಾಯ ಶುಭಸಂಸನೆಗೈದರು.

ಮುಖ್ಯ ಅತಿಥಿಗಳಾಗಿ ಕ್ರೇಡೈ ಉಡುಪಿ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ, ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಚೇರ್‌ಮನ್ ಕೆ.ನಾಗರಾಜ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೈಂದೂರು ಪ್ಯಾಲೇಸ್ ಪ್ರವರ್ತಕ ರಾಜೀವ ರವರ ಪುಸ್ತಕ ಬಿಡುಗಡೆಗೊಳಿಸಲಾಯಿತು.ಸಾಜು ಹಾಗೂ ಕಟ್ಟಡ ವಿನ್ಯಾಸಗಾರರಾದ ಮಹಿಮಾ ರವರನ್ನು ಅಭಿನಂದಿಸಲಾಯಿತು ಹಾಗೂ ಗ್ರಾಹಕರಿಗೆ ಮನೆಯ ಕೀ ಗಳನ್ನು ಹಸ್ತಾಂತರಿಸಲಾಯಿತು.

ರಾಮನಾಥ ಗ್ರೂಪ್ ಕಂಪೆನಿಸ್ ಪ್ರವರ್ತಕ ಕೆ.ವೆಂಕಟೇಶ ಕಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

News/pic: Giri shiruru

 

 

 

 

 

 

 

 

 

 

 

Leave a Reply

Your email address will not be published.

two × 4 =