ಶಿರೂರು: ಗ್ರಾಮ ಸಭೆಯಲ್ಲಿ ನಿರ್ಣಯಗೊಂಡಿರುವ ವಿಷಯಗಳು ಕೇವಲ ಕಡತಕ್ಕೆ ಮಾತ್ರ ಸೀಮಿತವಾಗದೆ ಸಮರ್ಪಕವಾಗಿ ಅನುಷ್ಟಾನಗೊಳ್ಳಬೇಕು ಎಂದು ಶಿರೂರು ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.ಕಳೆದ ಬಾರಿ ಅಧಿಕಾರಿಗಳು ಆಗಮಿಸದೆ ಮುಂದೂಡಲ್ಪಟ್ಟ 2022-24ನೇ ಸಾಲಿನ ಗ್ರಾಮಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆಯಿತು.

ಶಿರೂರು ಗ್ರಾ.ಪಂ.ಅಧ್ಯಕ್ಷೆ  ನಾಗರತ್ನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ದಲಿತರ ಸಮಸ್ಯೆಗಳಿಗೆ ನ್ಯಾಯ ನೀಡಲು ಆಗ್ರಹ: ಖಾಸಗಿ ವ್ಯಕ್ತಿ ನಕಲಿ ದಾಖಲೆ ಸೃಷ್ಟಿಸಿ ದಲಿತರ ಕಾಲೋನಿಯಲ್ಲಿ ಯಾರಿಗೂ ಮಾಹಿತಿ ಇಲ್ಲದೆ ಜಾಗ ಮಾರಾಟಕೊಂಡಿರುವ ಜೊತೆಗೆ ಅನುಮತಿ ಇಲ್ಲದೆ ಸಾವಿರಾರು ಲೋಡ್ ಮಣ್ಣು ಸಾಗಾಟ ಮಾಡಿದ್ದಾರೆ.ಭೂ ವಿಕ್ರಯಕ್ಕೆ ಹಲವು ನಿಯಮಗಳಿವೆ ದಲಿತರ ಮನೆ ಬಿರುಕು ಬಿಟ್ಟಿದ್ದು ಅಂಬೇಡ್ಕರ ಸಭಾ ಭವನದಲ್ಲಿ ವಾಸಿಸುವಂತಾಗಿದೆ.ತಕ್ಷಣ ಸಂಬಂದಪಟ್ಟವರಿಗೆ ನೋಟಿಸ್ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಶಿರೂರು ಸರಕಾರಿ ಆಸ್ಪತ್ರೆಯಲ್ಲಿ ಸಿಬಂದಿಗಳಿಲ್ಲ; ಕೆಲಸ ಬಿಟ್ಟು ಜನ ಸಾಮಾನ್ಯರು ದಿನಗಟ್ಟಲೆ ಆಸ್ಪತ್ರೆಯಲ್ಲಿ ಕಾಯಬೇಕು ಹೀಗಾಗಿ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನುಕೂಲ ಮಾಡಿಕೊಡಬೇಕು ಎಂದರು.ಬೀಡಾಡಿ ದನಗಳಿಂದ ಅಪಘಾತ ಜಾಸ್ತಿಯಾಗುತಿದ್ದು ಇಲಾಖೆ ಈ ಬಗ್ಗೆ ಗಮನ ಹರಿಸಲು ಸಾರ್ವಜನಿಕರು ಮನವಿ ಮಾಡಿದರು.ಸ್ವಚ್ಚತೆ ಮತ್ತು ಇತರ ವಿಷಯ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ,ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್,ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರು ಹಾಜರಿದ್ದರು.

ಗ್ರಾ.ಪಂ ಸಿಬಂದಿ ಶಂಕರ ಬಿಲ್ಲವ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

 

 

 

 

 

Leave a Reply

Your email address will not be published.

15 − 15 =