ಬೈಂದೂರು: ತಾಲೂಕು ಆಡಳಿತ ಬೈಂದೂರು,ಪಟ್ಟಣ ಪಂಚಾಯತ್ ಬೈಂದೂರು,ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಬೈಂದೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೈಂದೂರು,ಪೊಲೀಸ್ ವೃತ್ತ ನಿರೀಕ್ಷಕ ಕಛೇರಿ ಬೈಂದೂರು ಹಾಗೂ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಬೈಂದೂರು ತಾಲೂಕು ಇದರ ಆಶ್ರಯದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಬೈಂದೂರು ಪ್ರವಾಸಿ ಮಂದಿರದ ವಠಾರದಲ್ಲಿ ಆಚರಿಸಲಾಯಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಡು,ನುಡಿಯ ಅಭಿಮಾನ ಪ್ರತಿಯೊಬ್ಬ ಕನ್ನಡಿಗರ ಜವಬ್ದಾರಿಯಾಗಿದೆ.ಕನ್ನಡದ ಉಳಿವಿನ ಜೊತೆಗೆ ಭಾಷಾಭಿಮಾನ ಮತ್ತು ನಾಡು,ನುಡಿಯ ಚಿಂತನೆಗೆ ಶ್ರಮಿಸಿದ ಅನೇಕ ಮಹಾನ್ ನಾಯಕರ ಕೊಡುಗೆಗಳನ್ನು ಸ್ಮರಿಸುತ್ತಾ ಇಲ್ಲಿನ ನೆಲ,ಜಲ,ಸಂಸ್ಕ್ರತಿಯ ರಕ್ಷಣೆಗೆ ಕಟಿಬದ್ದರಾಗೋಣ ಎಂದರು.
ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮೀ ಹೆಚ್.ಎಸ್ ದ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ,ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸೂರ್ಯಕಾಂತ ಖಾರ್ವಿ,ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್,ಬೈಂದೂರು ಠಾಣಾಧಿಕಾರಿ ನಿರಂಜನ್ ಗೌಡ,ಉಪತಹಶೀಲ್ದಾರ ಭೀಮಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಹಾಜರಿದ್ದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗಣಪತಿ ಹೋಬಳಿದಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
News/Giri shiruru