ಶಿರೂರು; ಖಾಸಗಿ ವ್ಯಕ್ತಿಯೊರ್ವರು ಮಣ್ಣು ತೆಗೆದು ಹಾಗೂ ದಲಿತರ ಮನೆಯ ಅಪಾಯದಲ್ಲಿರುವ ಶಿರೂರು ಗ್ರಾ.ಪಂ ವ್ಯಾಪ್ತಿಯ ದಲಿತ ಕಾಲೋನಿಯ ಸ್ಥಳಕ್ಕೆ ಶಿರೂರು ಗ್ರಾ.ಪಂ ಅಧ್ಯಕ್ಷ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ಹಾಗೂ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಸೋಮವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು ಮಾತ್ರವಲ್ಲದೆ ಈ ಸ್ಥಳದಲ್ಲಿ ಗ್ರಾಮ ಪಂಚಾಯತ್‌ಗೆ ಸಂಬಂಧಪಟ್ಟ ಚರಂಡಿ ಸೇರಿದಂತೆ ಇನ್ನಿತರವುಗಳು ಕೂಡ ಹಾನಿಯಾಗಿದ್ದು ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಉದಯ ಪೂಜಾರಿ ಮೈದಿನಪುರ,ಪ್ರಸನ್ನ ಶೆಟ್ಟಿ ಕರಾವಳಿ ಮೊದಲಾದವರು ಹಾಜರಿದ್ದರು.