ಬೈಂದೂರು: ಬೈಂದೂರು ತಾಲೂಕು ಮಡಿವಾಳರ ಸಂಘ (ರಿ.) ಇದರ ಪೂರ್ವಭಾವಿ ಸಭೆ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುರುಮಾಚಿದೇವ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಆನಂದ ಮಡಿವಾಳ ಸಮಾಜದ ಶೈಕ್ಷಣಿಕ,ಆರ್ಥಿಕ ,ರಾಜಕೀಯ ಸೇರಿದಂತೆ ಸಾಂಸ್ಕ್ರತಿಕ ವಾಗಿ ಸಂಘಟಿತರಾಗಲು ಬೈಂದೂರು ತಾಲೂಕಿನಲ್ಲಿ ಮಡಿವಾಳ ಸಂಘವನ್ನು ಆರಂಭಿಸಲಾಗುತ್ತಿದೆ.ಈ ಹಿಂದೆ ಕುಂದಾಪುರ ಜಂಟಿಯಾಗಿದ್ದು ವಿವಿದ ಸಮುದಾಯದ ಸಂಘಟನೆಯಂತೆ ನಮ್ಮ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ,ಯುವ ಸಮುದಾಯಕ್ಕೆ ಮುಖ್ಯವಾಹಿನಿಗೆ ಬರಲು ಅವಕಾಶ ,ಮಹಿಳೆಯರಿಗೆ ಸರಕಾರದ ಸೌಲಭ್ಯ ಒದಗಿಸುವ ಜೊತೆಗೆ ಅಶಕ್ತರಿಗೆ ನೆರವು ಸೇರಿದಂತೆ ಹಲವು ಕಲ್ಪನೆಗಳನ್ನು ಹೊಂದಿದೆ.ಜನವರಿ 07 ರಂದು ಮಹಾಸಭೆ ನಡೆಯಲಿದೆ.ಸಂಘಟಿತರಾಗಿ ಸಮುದಾಯದ ಅಭಿವ್ರದ್ದಿ ಸಾಧಿಸುವ ಚಿಂತನೆ ಹೊಂದಿದೆ ಎಂದರು.

ಬೈಂದೂರು ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಮಂಜುನಾಥ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಗುರುಮಾಚಿದೇವ ವಿವಿದ್ದೋಶ ಸಹಕಾರಿ ಸಂಘದ ಉಪಾಧ್ಯಕ್ಷ ಕೆ.ಶಂಕರ ಹಕ್ಲಾಡಿ, ಬೈಂದೂರು ತಾಲೂಕು ಸಂಘದ ಉಪಾಧ್ಯಕ್ಷ ಹೆಚ್.ಮಹಾಬಲ, ಕೋಶಾಕಾರಿ ಮಹಾಬಲ ಮಡಿವಾಳ, ಬೈಂದೂರು ಘಟಕದ ಅಧ್ಯಕ್ಷ ಸಂತೋಷ ಎಂ. ಬೈಂದೂರು, ಕುಂದಾಪುರ ತಾಲ್ಲೂಕು ಮಡಿವಾಳ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಶಂಕರ ಕೋಣ್ಕಿ, ವೆಂಕಟೇಶ್, ನಾಗರಾಜ, ಗಣೇಶ, ನಾಗರಾಜ, ಆನಂದ ಮಡಿವಾಳ, ಶಾರದ ಮಡಿವಾಳ ಉಪಸ್ಥಿತರಿದ್ದರು.

News/Giri shiruru

Leave a Reply

Your email address will not be published. Required fields are marked *

eleven − five =