: ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಮಾನಸ ಮಿತ್ರ ಮಂಡಳಿ ಊರಿನ ಅಭಿವೃದ್ದಿಯ ಜೊತೆಗೆ ಸಂಘಟನಾತ್ಮಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.ಕ್ರೀಡಾಕೂಟದ ಮೂಲಕ ಯುವ ಸಮುದಾಯಕ್ಕೆ ಉತ್ತಮ ಆವಕಾಶ ನೀಡುತ್ತಿದೆ ಎಂದು ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಅನೀಶ್ ಕುಮಾರ್ ಶೆಟ್ಟಿ ಹೇಳಿದರು ಅವರು ಮಾನಸ ಮಿತ್ರ ಮಂಡಳಿ ಆಲಂದೂರು ಇದರ ವತಿಯಿಂದ ಸ.ಕಿ.ಪ್ರಾ.ಶಾಲೆ ಆಲಂದೂರಿನಲ್ಲಿ ನಡೆದ 20ನೇ ವರ್ಷದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಲಂದೂರು ಶಾಲೆಯ ಮುಖ್ಯ ಶಿಕ್ಷಕ ಮಾಧವ ಬಿಲ್ಲವ,ಆಲಂದೂರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರವೀಂದ್ರ ಗಾಣಿಗ,ಶ್ರೀ ಗಣೇಶ ಯುವಕ ಸಂಘದ ಅಧ್ಯಕ್ಷ ಅಜಿತ್ ಕೊಠಾರಿ,ಚಂದ್ರ ಕೊಠಾರಿ,ಬೆಳಕೆ ಗ್ರಾಮೀಣ ಬ್ಯಾಂಕ್ ಶಿರೂರು ಶಾಖೆಯ ರಾಜು ವಿ.ಪಿ,ಹರೀಶ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಆಲಂದೂರು ಮಂಜುನಾಥ ಗಾಣಿಗ ಸ್ವಾಗತಿಸಿದರು.ಶಿಕ್ಷಕ ಪ್ರಕಾಶ ಮಾಕೋಡಿ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ಶ್ರೀಕಾಂತ ಕಾಮತ್ ವಂದಿಸಿದರು.
News/Giri shiruru
pic: suresh makodi