ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಕರಾವಳಿ ಶಿರೂರು ಇದರ ರಜತ ಮಹೋತ್ಸವ ಬೆಳ್ಳಿ ಬೆಡಗು -2023 ಸಂಭ್ರಮದಿಂದ ಸಂಪನ್ನಗೊಂಡಿದೆ.ಕಳೆದ 25 ವರ್ಷಗಳಿಂದ ಶಿರೂರು ಕರಾವಳಿ ಭಾಗದಲ್ಲಿ ಸಾಂಸ್ಕ್ರತಿಕ,ಸಾಮಾಜಿಕ ಚಟುವಟಿಕೆಯ ಜೊತೆಗೆ ಗಣೇಶೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದು ಸುಸಜ್ಜಿತ ಸಭಾಭವನ,ವಿಶಾಲವಾದ ಸ್ಥಳವನ್ನು ಹೊಂದಿದೆ.25ರ ಸಂಭ್ರಮಕ್ಕಾಗಿ ಬೆಳ್ಳಿ ಬೆಡಗು -2023 ಕಾರ್ಯಕ್ರಮ ಆಯೋಜಿಸಿದ್ದು ಈ ಭಾಗದಲ್ಲಿ ಕರಾವಳಿ ಚೌತಿ ಎಂದೆ ಪ್ರಸಿದ್ದಿಗೊಂಡಿದೆ.ಮೂರು ದಿನಗಳಿಂದ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಭಿಮಾನಿಗಳು ಆಗಮಿಸಿ ದೇವರ ದರ್ಶನ ಪಡೆದರು.ಅಥರ್ವಶೀರ್ಷ ಹೋಮ, ಅನ್ನದಾನ,ಗಣಹೋಮ,ವಿವಿಧ ಸ್ಪರ್ಧೆಗಳು,ಯಕ್ಷಗಾನ,ಸಾಂಸ್ಕ್ರತಿಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೈಭವದ ಪುರಮೆರವಣಿಗೆ: ಯುವಶಕ್ತಿ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿದೆ.ಅಪಾರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸಿದ್ದು ಕೀಲು ಕುದುರೆ,ಚಂಡೆ ತಂಡ,ನೃತ್ಯ ತಂಡ,ಮಹಿಳಾ ಭಜನಾ ತಂಡ,ಡಿ.ಜೆ ಸೇರಿದಂತೆ ಹತ್ತಾರು ಸಾಂಸ್ಕ್ರತಿಕ ತಂಡಗಳು ಮೆರವಣಿಗೆಯ ವಿಶೇಷತೆಯಾಗಿತ್ತು.
ಅಭಿನಂದನಾ ಸಭೆ: 25ನೇ ವರ್ಷದ ಗಣೇಶೋತ್ಸವ ಯಶಸ್ವಿಯಾಗಿ ಆಯೋಜನೆಯಾದ ಹಿನ್ನೆಲೆಯಲ್ಲಿ ಅಭಿನಂದನಾ ಸಭೆ ಯುವಶಕ್ತಿ ಸಭಾವೇದಿಕೆಯಲ್ಲಿ ನಡೆಯಿತು.ಸಭೆಯಲ್ಲಿ ಬೆಳ್ಳಿ ಬೆಡಗು ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಲಾಯಿತು.ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್ ಉಪಸ್ಥಿತರಿದ್ದರು.
ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಮಾತನಾಡಿ ಈ ವರ್ಷದ ಗಣೇಶೋತ್ಸವ ಆಚರಣೆ ಯಶಸ್ವಿಗೆ ಸಮಸ್ತ ಕರಾವಳಿಯ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.ಈ ಉತ್ಸವದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಮಾಜಿ ಅಧ್ಯಕ್ಷ ಉಮೇಶ್ ಮೊಗೇರ್ ಸ್ವಾಗತಿಸಿದರು.ಕಾರ್ಯದರ್ಶಿ ಮಹೇಶ್ ಮೊಗೇರ್ ಕಾರ್ಯಕ್ರಮ ನಿರ್ವಹಿಸಿದರು.ಸದಸ್ಯ ಮನೋಹರ ಬಿಲ್ಲವ ವಂದಿಸಿದರು.
News/Giri shiruru
pic/Smart studio shiruru