ಬೈಂದೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,ಶಿಶು ಅಭಿವೃದ್ದಿ ಯೋಜನೆ ಕುಂದಾಪುರ,ತಾಲೂಕು ಪಂಚಾಯತ್ ಬೈಂದೂರು ಇದರ ಸಹಯೋಗದೊಂದಿಗೆ ಪೋಷಣ್ ಮಾಸಾಚರಣೆ ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.
ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮನೆ ಆಹಾರ ಮತ್ತು ಪರಿಸರದ ಸುತ್ತಮುತ್ತ ದೊರೆಯುವ ಪದಾರ್ಥಗಳು ತರಕಾರಿ ಸೇರಿದಂತೆ ದೊರೆಯುವ ಅಗತ್ಯ ವಸ್ತುಗಳು ಅತ್ಯಧಿಕ ಪೌಷ್ಠಿಕಾಂಶ ಹೊಂದಿರುತ್ತದೆ.ಆಧುನಿಕತೆ ಬೆಳೆದಂತೆ ಆಹಾರ ಪದ್ದತಿ ಬದಲಾಗುತ್ತಿದೆ.ನಿಯಮಿತ ಆಹಾರ ಮತ್ತು ಆರೋಗ್ಯ ಕಾಳಜಿ ಅತ್ಯಗತ್ಯ.ಇಂತಹ ಕಾರ್ಯಕ್ರಮಗಳು ವೇದಿಕೆಗೆ ಸೀಮಿತವಾಗಿರದೆ ಜನಸಾಮಾನ್ಯರನ್ನು ತಲುಪಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ,ಶಿರೂರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ,ಸಂಪನ್ಮೂಲ ವ್ಯಕ್ತಿ ಡಾ.ವೀಣಾ ಕಾರಂತ್,ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್,ಗ್ರಾ.ಪಂ ಸದಸ್ಯರಾದ ರವೀಂದ್ರ ಶೆಟ್ಟಿ ಪಟೇಲ್,ಪ್ರಸನ್ನ ಕುಮಾರ್ ಶೆಟ್ಟಿ,ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಶಕೀಲ್ ಆಹ್ಮದ್,ಸಂದ್ಯಾ,ರಶೀದಾ ಮುಂತಾದವರು ಉಪಸ್ಥಿತರಿದ್ದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೇಬಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬೈಂದೂರು ವಲಯ ಅಂಗನವಾಡಿ ಮೇಚಾರಕಿ ರೇವತಿ ಸ್ವಾಗತಿಸಿದರು.ತಾಲೂಕು ಪೋಷಣ್ ಅಭಿಯಾನ ಸಂಯೋಜಕ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.ಶಿರೂರು ವಲಯ ಅಂಗನವಾಡಿ ಮೇಲ್ವಿಚಾರಕಿ ರೇವತಿ ವಂದಿಸಿದರು.