ಶಿರೂರು: ಸಂಘಟನೆಯಿಂದ ಗ್ರಾಮದ ಅಭಿವೃದ್ದಿ ಸಾಧ್ಯ.ಶಿರೂರಿನಂತಹ ಗ್ರಾಮೀಣ ಭಾಗದಲ್ಲಿ ಯುವಶಕ್ತಿ ಗಣೇಶೋತ್ಸವ ಸಮಿತಿ ಕಳೆದ 25 ವರ್ಷಗಳಿಂದ ಸಂಘಟಿತಗೊಂಡು ಧಾರ್ಮಿಕ,ಸಾಂಸ್ಕ್ರತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದು ಈ ಸಂಘದ ಕಾರ್ಯವೈಖರಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು ಅವರು ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 25ನೇ ವರ್ಷದ ರಜತ ಸಂಭ್ರಮ -2023 ಕಾರ್ಯಕ್ರಮಕ್ಕೆ ಆಗಮಿಸಿ ಅಭಿನಂದನೆ ಸ್ವೀಕರಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ರವೀಂದ್ರ ಶೆಟ್ಟಿ ಹೊನ್ಕೇರಿ,ಯುವಶಕ್ತಿ ಗೌರವಾಧ್ಯಕ್ಷ ಮಂಗಳು ಬಿಲ್ಲವ,ಮಾಜಿ ಅಧ್ಯಕ್ಷ ವಾಸು ಬಿಲ್ಲವ ತೆಂಕಮನೆ,ಕೋಶಾಧಿಕಾರಿ ಅಣ್ಣಪ್ಪ ಮೊಗೇರ್,ಉಪಾಧ್ಯಕ್ಷ ಸುರೇಶ್ ಮೊಗೇರ್ ಗಿಡ್ಡಿಮನೆ,ಉತ್ಸವ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಮೇಸ್ತ,ಹಿರಿಯರಾದ ನಾಣು ಬಿಲ್ಲವ,ಯುವಶಕ್ತಿ ಮಾಜಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ೨೫ನೇ ವರ್ಷದ ರಜತ ಮಹೋತ್ಸವ ಸವಿನೆನಪಿಗಾಗಿ ಮಹಿಳೆಯರ ಕುತ ಭಜನಾ ಸ್ಪರ್ಧೆ ನಡೆಯಿತು.ಭಜನಾ ಸ್ಪರ್ಧೆಯಲ್ಲಿ ಜೈ ಶ್ರೀರಾಮ್ ಮಹಿಳಾ ಭಜನಾ ಮಂಡಳಿ ಕಂಚುಗೋಡು ಪ್ರಥಮ ಸ್ಥಾನ ಪಡೆಯಿತು ಹಾಗೂ ನಾಗ ಚೌಡೇಶ್ವರಿ ಮಹಿಳಾ ಭಜನಾ ಮಂಡಳಿ ಭಟ್ಕಳ ದ್ವಿತೀಯ ಸ್ಥಾನ ಪಡೆದರು.೮ಕ್ಕೂ ಅಧಿಕ ತಂಡಗಳು ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಕಾರ್ಯದರ್ಶಿ ಮಹೇಶ್ ಮೊಗೇರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಯುವಶಕ್ತಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ಮಹೇಂದ್ರ ಬಿಲ್ಲವ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಸ್ಮಾರ್ಟ್ ಸ್ಟುಡಿಯೋ ಶಿರೂರು