ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 25ನೇ ವರ್ಷದ ಸಂಭ್ರಮದಲ್ಲಿದೆ.ರಜತ ಮಹೋತ್ಸವದ ಸವಿನೆನಪಿಗಾಗಿ ಸೆಪ್ಟೆಂಬರ್ 18,19 ಹಾಗೂ 20 ರಂದು ಕರಾವಳಿಯಲ್ಲಿ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮ ನಡೆಯಲಿದೆ.
ಯುವಶಕ್ತಿ ನಡೆದು ಬಂದ ದಾರಿ: 25 ವರ್ಷಗಳ ಹಿಂದೆ ಸಣ್ಣ ಕಟ್ಟಡದಲ್ಲಿ ಆರಂಭಗೊಂಡಿರುವ ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಇಂದು ಸುಸಜ್ಜಿತ ಸಭಾಭವನ,ನಿವೇಶನದ ಜೊತೆಗೆ ಅಡುಗೆಕೋಣೆ ನಿರ್ಮಾಣದ ಸಿದ್ದತೆಯಲ್ಲಿದೆ.
ಗಣಪತಿ ಅಥರ್ವಶೀರ್ಷ ಹೋಮ: ರಜತ ಮಹೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಗಣಪತಿಗೆ ಅತ್ಯಂತ ಪ್ರಿಯವಾದ ಗಣಪತಿ ಅಥರ್ವಾಶೀರ್ಷ ಹೋಮ ಸೆ.19 ಹಾಗೂ 20 ರಂದು ನಡೆಯಲಿದೆ.ಸುಮಾರು 40 ಜನ ಪುರೋಹಿತರು ಈ ಹೋಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಗಳ ವಿವರ: ಸೆ.18 ರಂದು ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ,ಮದ್ಯಾಹ್ನ 12 ಗಂಟೆಗೆ ಸಹಸ್ರನಾಮ ಪೂಜೆ,ಮಹಾಪೂಜೆ,ಮಹಾಮಂಗಳಾರತಿ,ಸಂಜೆ 6 ರಿಂದ ಆಯ್ದ ಮಹಿಳಾ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ,ರಾತ್ರಿ ರಂಗಪೂಜೆ,ರಾತ್ರಿ ಪೂಜೆ,ರಾತ್ರಿ 9 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ,ಸಂಜೆ 9 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ.
ಸೆ.19 ರಂದು ಬೆಳಿಗ್ಗೆ 10 ಗಂಟೆಗೆ ಗಣಹೋಮ,ಮದ್ಯಾಹ್ನ ಸರ್ವಪೂಜೆ,ಅನ್ನಸಂತರ್ಪಣೆ,ಮದ್ಯಾಹ್ನ ಮಹಿಳಾ ಕಾರ್ಯಕ್ರಮ,ಸಂಜೆ ಭಜನೆ ಕಾರ್ಯಕ್ರಮ,ರಾತ್ರಿ ಪೂಜೆ, ರಾತ್ರಿ 9 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಬಳಿಕ ಆನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಕಂಸ ದಿಗ್ವಿಜಯ -ಕವಿರತ್ನ ಕಾಳಿದಾಸ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಸೆ.20 ರಂದು ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಅಥರ್ವಾಶೀರ್ಷ ಹೋಮ,ಮದ್ಯಾಹ್ನ ಅನ್ನಸಂತರ್ಪಣೆ,ವಿಸರ್ಜನಾ ಪೂಜೆ,ಪಲಾವಳಿಗಳ ಏಲಂ ಬಳಿಕ ಆದ್ದೂರಿ ಪುರಮೆರವಣಿಗೆ ನಡೆಯಲಿದೆ.
ಅದ್ದೂರಿಯ ಪುರಮೆರವಣಿಗೆ: ಸೆ.20 ರಂದು ಅದ್ದೂರಿಯ ಪುರಮೆರವಣಿಗೆ ನಡೆಯಲಿದೆ.ಪುರ ಮೆರವಣಿಗೆಯಲ್ಲಿ ವಿವಿಧ ಟ್ಯಾಬ್ಲೋ,ಕೀಲುಕುದುರೆ,ಭಜನಾ ತಂಡ,ಡಿ.ಜೆ ಸೇರಿದಂತೆ ಹತ್ತಕ್ಕೂ ಅಧಿಕ ಕಲಾ ತಂಡಗಳು ಆಗಮಿಸಲಿದೆ.ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಕರಾವಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ/ಗಿರಿ ಶಿರೂರು