ಬೈಂದೂರು: ಜೆಸಿಐ ಉಪ್ಪುಂದ ಇದರ 19 ನೇ ವರ್ಷದ ಜೇಸಿ ಸಪ್ತಾಹ ದಿಗ್ವಿಜಯ -2023 ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಧಾರ್ಮಿಕ ಮುಖಂಡ ಮಾರಣಕಟ್ಟೆಯ ಶ್ರೀ ಕೃಷ್ಣಮೂರ್ತಿ ಮಂಜರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ ಜೆಸಿಐ ಸಂಸ್ಥೆ ಸಮಾಜಮುಖಿ ಕಾರ್ಯದ ಮೂಲಕ ಜಗತ್ತಿನಾದ್ಯಂತ ಗುರುತಿಸಿಕೊಂಡಿದೆ.ಸಂಘಟನಾ ಸಾಮರ್ಥ್ಯ ವ್ಯಕ್ತ್ತಿತ್ವ ವಿಕಸನದ ಜೊತೆಗೆ ಅವಕಾಶಗಳನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಉಪ್ಪುಂದ ಜೇಸಿಯ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಸಂತ್ ಕುಮಾರ್ ಶೆಟ್ಟಿ,ಉದ್ಯಮಿ ಜಯಾನಂದ ಹೋಬಳಿದಾರ್, ರೋ. ಪ್ರಸಾದ್ ಪ್ರಭು,ನಾಗಯ್ಯ ದೇವಾಡಿಗ ಕಳವಾಡಿ, ಉಪ್ಪುಂದ ಜೆಸಿಯ ಸ್ಥಾಪಕಾಧ್ಯಕ್ಷರಾದ ದಿವಾಕರ ಶೆಟ್ಟಿ, ಪೂರ್ವಾಧ್ಯಕ್ಷರಾದ ಯು.ಪ್ರಕಾಶ್ ಭಟ್,ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ಜೇಸಿ ರೆಟ್ ಅಧ್ಯಕ್ಷೆ ರೇಖಾ, ಜ್ಯೂನಿಯರ್ ಜೇಸಿ ಅಧ್ಯಕ್ಷೆ ಕು.ನಿಶಾ ಸಂತೋಷ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ನಾಗರಾಜ ಉಬ್ಜೇರಿ,ಸಭಾಪತಿ ಮಂಜುನಾಥ ದೇವಾಡಿಗ ಕಾರ್ಯಕ್ರಮದ ಯೋಜನಾಧಿಕಾರಿ ಶಿವಾನಂದ ಗಾಣಿಗ, ರಮೇಶ್ ಜೋಗಿ,ಸುನಿಲ್ ಪೂಜಾರಿ,ಸುಬ್ರಹ್ಮಣ್ಯ ಶೇಟ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಂಗಾವತಿಯ ವೈದ್ಯ ಡಾ. ಯು. ಮಾಧವ ಶೆಟ್ಟಿ ಯವರಿಗೆ ಅವರ ಶ್ರೇಷ್ಠ ವೈದ್ಯಕೀಯ ಸೇವೆ ಹಾಗೂ ಸಾಮಾಜಿಕ ಕಾರ್ಯವನ್ನು ಗುರುತಿಸಿ ಸಾಧನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು .ರೇಡಿಯೋ ನಿರೂಪಕಿ ಆರ್.ಜೆ.ನಯನ ಅವರಿಗೆ ನಿರೂಪಣೆ ಮತ್ತು ರೇಡಿಯೋ ಕ್ಷೇತ್ರದಲ್ಲಿನ ಸಾಧನೆಗಾಗಿ ವಿಶೇಷ ಗೌರವದ ಸನ್ಮಾನ ನೀಡಲಾಯಿತು.ದಾನಿಗಳಾದ ಕೃಷ್ಣಮೂರ್ತಿಮಂಜರನ್ನು.ನೂತನ ಶಾಸಕ ಗುರುರಾಜ ಗಂಟಿಹೊಳೆ,ಉಪ್ಪುಂದ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಮೋಹನಚಂದ್ರ ಉಪ್ಪುಂದ ರವರನ್ನು ಗೌರವಿಸಲಾಯಿತು.
ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪುರಂದರ ಉಪ್ಪುಂದ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಮುದ್ದುಕೃಷ್ಣ ಮತ್ತು ಮುದ್ದು ರಾಧೆ ಸ್ಪರ್ಧೆ ಹಾಗೂ ಕಾರ್ಯಕ್ರಮದ ನಂತರ ಮನು ಹೊಂದಾಡಿ ಅವರ ಹಾಸ್ಯ ಸಂಜೆ ಹಾಗೂ ಚೇತನ ನೈಲಾಡಿ ತಂಡದಿಂದ ಹೆಂಗಸರ ಪಂಚೇತಿ ಕಾರ್ಯಕ್ರಮ ನಡೆಯಿತು.