ಶಿರೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ಇದರ ಕೆ.ಸಿ.ಸಿ ಮೀನುಗಾರಿಕೆ ದುಡಿಯುವ ಬಂಡವಾಳ ಉದ್ದೇಶಕ್ಕೆ ಸಾಲ ಸಂಯೋಜನೆ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಸಾಲ ಪತ್ರ ವಿತರಣೆ ಕಾರ್ಯಕ್ರಮ ಶಿರೂರು ಶಾಖಾ ಕಛೇರಿಯಲ್ಲಿ ನಡೆಯಿತು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಸಾಲ ಪತ್ರ ವಿತರಿಸಿ ಮಾತನಾಡಿ ರಾಷ್ಟ್ರೀಕ್ರತ ಬ್ಯಾಂಕುಗಳಲ್ಲಿ ಸಣ್ಣ ಸಾಲಗಳಿಗೂ ಕೂಡ ನೂರೆಂಟು ದಾಖಲೆ ಬೇಕಿರುವುದರಿಂದ ಸಣ್ಣ ಮತ್ತು ಮದ್ಯಮ ಕುಟುಂಬದವರಿಗೆ ಸರಕಾರದ ಯೋಜನೆಗಳನ್ನು ಹಾಗೂ ಆರ್ಥಿಕ ಸಹಕಾರವನ್ನು ಸಮರ್ಪಕವಾಗಿ ಪಡೆಯಲು ಸಾದ್ಯವಿಲ್ಲ.ಆದರೆ ಸಹಕಾರಿ ಬ್ಯಾಂಕುಗಳು ಸ್ವ ಸಹಾಯ ಸಂಘ ಹಾಗೂ ಇತರ ಯೋಜನೆ ಮೂಲಕ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಮೂಲಕ ವ್ಯವಹಾರ ಹಾಗೂ ಕುಟುಂಬ ನಿರ್ವಹಿಸಲು ಸಹಕಾರ ನೀಡಿದೆ.ಮೀನುಗಾರಿಕಾ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುವ ಮೂಲಕ ಭರವಸೆ ಉಳಿಸಿಕೊಂಡಿದೆ.ಇಂತಹ ಯೋಜನೆಗಳ ಸಮರ್ಪಕ ಸದ್ಬಳಕೆ ಮತ್ತು ನಿಗದಿತ ಸಮಯದಲ್ಲಿ ಪಾವತಿಸುವ ಮೂಲಕ ಉತ್ತಮ ವ್ಯವಹಾರ ನಡೆಸಬೇಕಾಗಿದೆ ಹಾಗೂ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಡಿ.ಜಿ.ಎಮ್ ಸುನೀಲ್ ಕುಮಾರ್ ಹೊಳ್ಳ,ಶಿರೂರು ಶಾಖೆಯ ಪ್ರಬಂಧಕ ರಾಜೇಶ್ ಶೇಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ 5 ಮೀನುಗಾರರಿಗೆ ಸಾಲ ಪತ್ರ ವಿತರಿಸಲಾಯಿತು.ಶಾಖಾ ಸಿಬಂದಿ ನಾಗರಾಜ ಕೊಠಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ದೇವೇಂದ್ರ ಮೊಗೇರ್ ವಂದಿಸಿದರು.

 

 

Leave a Reply

Your email address will not be published. Required fields are marked *

1 + 2 =