ಬೈಂದೂರು: ರೋಟರಿ ಕ್ಲಬ್ ಬೈಂದೂರು, ಇನ್ನರ್ ವೀಲ್ ಕ್ಲಬ್ ಬೈಂದೂರು ಮತ್ತು ಸಮುದಾಯ ಆರೋಗ್ಯ ಕೇಂದ್ರ ಇವರ ಸಹಭಾಗಿತ್ವದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ತಾಯಂದಿರಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ತಜ್ಞೆ ಡಾ.ನಂದಿನಿ ಮಹಿಳೆ ಮತ್ತು ಮಕ್ಕಳ ಆರೋಗ್ಯದ ಕುರಿತು ವಿಸ್ತ್ರತವಾದ ಮಾಹಿತಿ ನೀಡಿ ಗರ್ಭಿಣಿಯಾಗುವ ಪೂರ್ವದಿಂದ ಮಗುವಿನ ಆರೈಕೆಯವರೆಗೆ ಕಂಡುಬರಬಹುದಾದ ಸಮಸ್ಯೆಗಳು ಸೇವಿಸಬೇಕಾದ ಆಹಾರ,ತೆಗೆದುಕೊಳ್ಳಬೇಕಾದ ಲಸಿಕೆಗಳು, ಗರ್ಭಿಣಿ ಮತ್ತು ಬಾಣಂತಿಯರ ಮಾನಸಿಕ ಆರೋಗ್ಯ ,ನವಜಾತ ಶಿಶುಗಳಿಗೆ ಸಿಗಬೇಕಾದ ಸ್ವಚ್ಛ ಮತ್ತು ಲವಲವಿಕೆಯ ವಾತಾವರಣ, ದುಶ್ಚಟಗಳ ಪರಿಣಾಮ, ಕೆಲವೊಂದು ಔಷಧಗಳ ಅಡ್ಡ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಚಂದ್ರಿಕಾ ರಾಮು, ಕಾರ್ಯದರ್ಶಿ ಮಾನಸ ರಾವ್ ಉಪಸ್ಥಿತರಿದ್ದರು.
ಪೂರ್ವ ಸಹಾಯಕ ಗವರ್ನರ್ ಸೋಮನಾಥನ್ ಆರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರೋಟರಿ ಕ್ಲಬ್ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು.ಮಂಜುನಾಥ್ ಮಹಾಲೆ ವಂದಿಸಿದರು.ಸುಮಾರು 50 ತಾಯಂದಿರು ಕಾರ್ಯಕ್ರಮದ ಪ್ರಯೋಜನ ಪಡೆದರು.