ಶಿರೂರು: ಗ್ರಾಮಾಭಿವೃದ್ದಿ ಯೋಜನೆಯ ಪರಿಕಲ್ಪನೆ ಮತ್ತು ಸೇವಾ ಚಟುವಟಿಕೆಗಳ ಬಗ್ಗೆ ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವ ಸಲುವಾಗಿ ರಾಜ್ಯಾದ್ಯಂತ ಸೇವಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡುತ್ತಿದೆ.ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಇಂತಹ ಸೇವಾ ಕೇಂದ್ರ ತೆರೆಯಲು ಮುಂದಾಗಿದ್ದು ಇದರೊಂದಿಗೆ ಯುವಜನತೆಗೆ ಉದ್ಯೋಗವಕಾಶ ಒದಗಿಸುವ ಕೆಲಸ ಪೂಜ್ಯರು ಮಾಡಿದ್ದಾರೆ ಎಂದು ಧ.ಗ್ರಾ.ಯೋಜನೆ ಕೇಂದ್ರ ಸಮಿತಿ ಮಾಜಿ ಸದಸ್ಯ ರಘುರಾಮ ಕೆ.ಪೂಜಾರಿ ಹೇಳಿದರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ, ಸಿ ಟ್ರಸ್ಟ್ (ರಿ) ಬೈಂದೂರು ತಾಲೂಕಿನ ಬೈಂದೂರು ವಲಯದ ಕರಾವಳಿ ಯಲ್ಲಿ ನೂತನ ಸೇವಾ ಕೇಂದ್ರವನ್ನು  ಉದ್ಘಾಟಿಸಿ ಮಾತನಾಡಿ ಪ್ರಾಮಾಣಿಕತೆಯಿಂದ ಸೇವೆಯನ್ನು ನೀಡುವ ಜೊತೆಗೆ ಉಜ್ವಲವಾಗಿ ಉತ್ಕ್ರಷ್ಟವಾಗಿ ಬೆಳೆಯಬೇಕು ಹಾಗೂ ಜನರಿಗೆ ಅರಿವು ಮೂಡಿಸುವ ಮೂಲಕ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ಕಟ್ಟಡದ ಮಾಲೀಕರಾದ ನಾಗಮ್ಮ ನಾಗಪ್ಪ ಮೊಗವೀರ, ಒಕ್ಕೂಟದ ಅಧ್ಯಕ್ಷ ವಿನಾಯಕ್ ಪೂಜಾರಿ,ಕರಾವಳಿ ಯುವಶಕ್ತಿ ಗಣೆಶೋತ್ಸವ ಸಮಿತಿ ಗೌರವ ಅಧ್ಯಕ್ಷ ಮಂಗಳು ಬಿಲ್ಲವ,ಆಂತರಿಕ ಲೆಕ್ಕ ಪರಿಶೋಧಕ ಶ್ರೀನಿವಾಸ್,ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ,ಮಾಜಿ ಅಧ್ಯಕ್ಷ ಯೋಗೀಶ್, ವಲಯದ ಮೇಲ್ವಿಚಾರಕ ರಾಮ ಎನ್, ಸೇವಾಪ್ರತಿನಿಧಿ ಪ್ರತಿಮಾ, ಗೀತಾ,ದೇವಕಿ ಬಿಲ್ಲವ,ಸುವಿಧಾ,ಸಹಾಯಕಿ ಸವಿತಾ,ಚಣ್ಣಮ್ಮ ಬಿಲ್ಲವ,ವೇಣುಗೋಪಾಲ ಪೂಜಾರಿ, ಭಾಸ್ಕರ್ ಮೊಗೇರ್ ಉಪಸ್ಥಿತರಿದ್ದರು.

 

Leave a Reply

Your email address will not be published.

17 + 17 =