ಬೈಂದೂರು: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಬಾರಿ ಗಾಳಿ ಮಳೆಯಿಂದಾಗಿ ಬೈಂದೂರು ಹಾಗೂ ಶಿರೂರು ಭಾಗದ ಬಹುತೇಕ ಕ್ರಷಿಭೂಮಿ ಜಲಾವ್ರತಗೊಂಡಿದೆ.ನದಿ ಕೆರೆ ತುಂಬಿ ಹರಿಯುತ್ತಿದೆ.ಮಳೆಯಿಂದಾಗಿ ಶಿರೂರು ಗ್ರಾಮದ ಕರಾವಳಿ ದೇವರಹಿತ್ಲು ರಾಧಾ ಪೂಜಾರಿ ಯವರ ಮನೆ ಮೇಲೆ ತೆಂಗಿನ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ.ಯಡ್ತರೆ ಗ್ರಾಮದ ಅತ್ತಿಕೇರಿ ಬಳಿ ಕಿರು ಸೇತುವೆ ನದಿ ನೀರಿನಲ್ಲಿ ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ.
ಬೈಂದೂರು ಮಳೆಯ ಅಬ್ಬರ,ಕೊಚ್ಚಿಹೋದ ಸೇತುವೆ; ಬೈಂದೂರು ಪರಿಸರದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.ಬಹುತೇಖ ಕ್ರಷಿ ಭೂಮಿ ಜಲಾವ್ರತಗೊಂಡಿದೆ.ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಗ್ರಾಮದ ನೀರೋಡಿ ಎಂಬಲ್ಲಿ ಕಿರು ಸೇತುವೆ ಕೊಚ್ಚಿ ಹೋಗಿದೆ ಕಳೆದ ವರ್ಷ ಪಟ್ಟಣ ಪಂಚಾಯತ್ ವತಿಯಿಂದ ಸುಮಾರು ಮೂರು ಲಕ್ಷ ರೂಪಾಯಿ ಅನುದಾನದಲ್ಲಿ ಕಿರು ಸೇತುವೆ ನಿರ್ಮಾಣ ಮಾಡಲಾಗಿತ್ತು. ಮಳೆಯಿಂದಾಗಿ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.ಪ್ರತಿದಿನ ಶಾಲೆಗೆ ತೆರಳುವ ಶಾಲಾ ವಿದ್ಯಾರ್ಥಿಗಳಿಗೆ,ರೈತರಿಗೆ,ಕೂಲಿ ಕಾರ್ಮಿಕರಿಗೆ ಈ ರಸ್ತೆಯೇ ಬಳಸುವುದರಿಂದ ಸೇತುವೆ ಕೊಚ್ಚಿ ಹೋದ ಪರಿಣಾಮ ಅತಂತ್ರ ಪರಿಸ್ಥಿತಿ ಉಂಟಾಗಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳು,ಪಂಚಾಯತ್ ಅಧಿಕಾರಿಗಳು ಶೀಘ್ರ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.ಆಲಂದೂರು,ತೂದಳ್ಳಿ,ಹೊಸೂರು,ಕರಾವಳಿ,ಮೇಲ್ಪಂಕ್ತಿ ಮುಂತಾದ ಕಡೆಗಳಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.