ಬೈಂದೂರು; ವಿದ್ಯಾರ್ಥಿಗಳಿಗೆ ಕೃಷಿ ಸೇರಿದಂತೆ ಪರಿಸರ ಕಾಳಜಿಯ ಅನುಭವ ಹಾಗೂ ಮಾಹಿತಿ ಅತ್ಯಗತ್ಯ.ರಾ.ಸೇ.ಯೋಜನೆಯಲ್ಲಿ ಸೇವೆಯ ಜೊತೆಗೆ ಸಮಾಜದ ಆಶೋತ್ತರಗಳಿಗೆ ಸ್ಪಂಧಿಸುವ ಶಿಕ್ಷಣ ನೀಡುತ್ತದೆ.ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಸೊರಗುತ್ತಿರುವ ನಡುವೆ ಇಂತಹ ಪ್ರಯತ್ನ ಉತ್ತಮ ಪ್ರಯತ್ನ.ಕೃಷಿ ಹಾಗೂ ಪರಿಸರ ಕಾಳಜಿ ಯುವಸಮುದಾಯಕ್ಕೆ ಅತ್ಯಗತ್ಯ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಜೆಸಿಐ ಉಪ್ಪುಂದ,ರಾಷ್ಟ್ರೀಯ ಸೇವಾ ಯೋಜನೆ ವಿಭಾಗ,ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇದರ ಸಂಯುಕ್ತ ಆಶ್ರಯದಲ್ಲಿ ಬಂಜರು ಭೂಮಿಯನ್ನು ಹಸನಾಗಿಸುವ ಸಂಕಲ್ಪದೊಂದಿಗೆ ಶಿರೂರು ಕರಾವಳಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಗದ್ದೆ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ,ಯಕ್ಷ ಸಂಪದ ಅಧ್ಯಕ್ಷ ಚಿಕ್ಕು ಪೂಜಾರಿ,ಉದ್ಯಮಿ ಗಣೇಶ ಗಾಣಿಗ ಉಪ್ಪುಂದ,ಯುವಶಕ್ತಿ ಮಾಜಿ ಅಧ್ಯಕ್ಷ ವಿಠ್ಠಲ ಬಿಲ್ಲವ,ಜೆಸಿಐ ವಲಯ ನಿರ್ದೇಶಕ ಅಕ್ಷತಾ ಗಿರೀಶ್ ಐತಾಳ್,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಜೆಸಿಐ ನಿಕಟಪೂರ್ವಾಧ್ಯಕ್ಷ ನಾಗರಾಜ ಉಬ್ಜೇರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ ಹಾಗೂ ಪ್ರಗತಿಪರ ಕೃಷಿಕರಾದ ವೆಂಕ್ಟ ಪೂಜಾರಿ ಕಾಳನಮನೆಯವರನ್ನು ಸಮ್ಮಾನಿಸಲಾಯಿತು.

ಯೋಜನಾಧಿಕಾರಿ ಡಾ.ಲತಾ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಯೋಜನಾಧಿಕಾರಿ ನವೀನ್ ಹೆಚ್.ಜಿ ಕಾರ್ಯಕ್ರಮ ನಿರ್ವಹಿಸಿದರು.ಜೆಸಿಐ ಉಪ್ಪುಂದ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾರಿಕಟ್ಟೆ ವಂದಿಸಿದರು.

News/pic: Giri shiruru

 

 

Leave a Reply

Your email address will not be published. Required fields are marked *

1 × two =