ಬೈಂದೂರು: ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಜೆಸಿಐ ಭಾರತದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಅಂಗವಾಗಿ ಕಳೆದ ಒಂಬತ್ತು ವರ್ಷಗಳಿಂದ ಮಯ್ಯಾಡಿ ಗ್ರಾಮದಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆಯ ಶಾರದಾ ಅವರನ್ನು ಜೆಸಿಐ ಉಪ್ಪುಂದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದ ಅಧ್ಯಕ್ಷg ಪ್ರದೀಪ್ ಶೆಟ್ಟಿ ಕಾರಿಕಟ್ಟೆ ,ವಲಯ ನಿರ್ದೇಶಕ ನಾಗರಾಜ್ ಪೂಜಾರಿ ಉಬ್ಜೇರಿ , ಪೂರ್ವಾಧ್ಯಕ್ಷ ಪ್ರಕಾಶ್ ಭಟ್,ಮಂಜುನಾಥ್ ದೇವಾಡಿಗ,ಮಂಗೇಶ್ ಶಾನುಭೋಗ ಜೆಸಿರೇಟ್ ಅಧ್ಯಕ್ಷೆ ರೇಖಾ,ಜೂನಿಯರ್ ಜೆ ಸಿ ಅಧ್ಯಕ್ಷೆ ನಿಶಾ ಸಂತೋಷ ಶೆಟ್ಟಿ,ಸುಬ್ರಮಣ್ಯ ಜಿ.ಉಪ್ಪುಂದ,ರಮಣಿ,ಕಾರ್ಯದರ್ಶಿ ಪುರಂದರ ಉಪಸ್ಥಿತರಿದ್ದರು.