ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಪ್ಪಾಡಿ ಇಲ್ಲಿನ ವಿದ್ಯಾರ್ಥಿಗಳಿಗೆ  ಲಯನ್ಸ್ ಕ್ಲಬ್ ತಲ್ಲೂರು ಮತ್ತು ಜೆ ಸಿ ಐ ಉಪ್ಪುಂದ ಇದರ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು.

ಲಯನ್ಸ್ ಕ್ಲಬ್‌ನ ಗೋಪಾಲ ಶೆಟ್ಟಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿ ತೀರ ಹಿಂದುಳಿದ ಪ್ರದೇಶದ ಸರಕಾರಿ ಶಾಲೆಗಳಿಗೆ ಅದರಲ್ಲೂ ವಿಶೇಷವಾಗಿ ಕೊರಗ ಸಮುದಾಯದ ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಓದುತ್ತಿರುವಂತ ಶಾಲೆಗಳಿಗೆ ಅಲ್ಲಿಯ ಸೌಲಭ್ಯಗಳನ್ನು ಹೆಚ್ಚಿಸಬೇಕಾದದ್ದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಇಂತಹ ಕಾರ್ಯವನ್ನು ನಿರ್ವಹಿಸುತ್ತಿರುವ ಜೆಸಿಯ ಮತ್ತು ಲಯನ್ಸ್‌ನ ಯುವಕರ ಹವ್ಯಾಸಗಳು ಎಲ್ಲರಿಗೂ ಅನುಕರಣಿಯ ಎಂದರು.

ಮುಖ್ಯ ಅತಿಥಿಗಳಾಗಿ ಸತ್ಯನಾರಾಯಣ ನೆಲಗಡಲೆ ಸಂಸ್ಕರಣ ಕೇಂದ್ರದ ಮಾಲಕ ಗಣೇಶ್ ಗಾಣಿಗ ಉಪ್ಪುಂದ,ಉಪ್ಪುಂದ ಜೆ ಸಿ ಐ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ, ಶಾಲಾ ಮುಖ್ಯ ಶಿಕ್ಷಕಿ ಸಕ್ಕು ಕೊಠಾರಿ, ಎಸ್ ಡಿ ಎಂ ಸಿ ಅಧ್ಯಕ್ಷೆ  ವನಜ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ  ಕಪ್ಪಾಡಿ, ಲಯನ್ಸ್ ಕ್ಲಬ್ ತಲ್ಲೂರಿನ ಖಜಾಂಜಿ  ನಾರಾಯಣ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ನಾಗರಾಜ್ ಪೂಜಾರಿ, ಪೂರ್ವಾಧ್ಯಕ್ಷ ಪ್ರಕಾಶ್ ಭಟ್,ಪದಾಧಿಕಾರಿಗಳಾದ ರಮೇಶ್ ಜೋಗಿ, ಶಿವಾನಂದ್ ಗಾಣಿಗ, ಮೋಹನ್ ಖಾರ್ವಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

twelve − six =