ಬೈಂದೂರು: ಬೈಂದೂರು ಕ್ಷೇತ್ರದ ನೂತನ ಶಾಸಕರ ಕಛೇರಿ ಉದ್ಘಾಟನೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಬೈಂದೂರು ನೂತನ ತಾಲೂಕು ಆಡಳಿತ ಕಛೇರಿಯಲ್ಲಿ ನಡೆಯಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಪಕ್ಷ ಅವಕಾಶ ನೀಡಿ ಶಾಸಕರನ್ನಾಗಿ ಮಾಡಿದೆ.ಹೀಗಾಗಿ ನಾವೆಲ್ಲರೂ ಪಕ್ಷದ ಅಡಿಯಲ್ಲಿ ಸಾಮರ್ಥ್ಯ ನಿರ್ವಹಿಸುವ ಕಾರ್ಯಕರ್ತರಾಗಿದ್ದೇನೆ.ಬೂತ್ ಮಟ್ಟದ ಸಮಿತಿಯಿಂದ ಹಿಡಿದು ಶಾಸಕರ ಕಛೇರಿಯವರೆಗೂ ಪ್ರತಿಯೊಂದು ಅಭಿವೃದ್ದಿ ವಿಷಯಗಳು ತಲುಪುವ ಪಾರದರ್ಶಕ ವ್ಯವಸ್ಥೆ ನಮ್ಮಿಂದಾಗಬೇಕಾಗಬೇಕಿದೆ.ಅಭಿವೃದ್ದಿ ಮೊದಲ ಆದ್ಯತೆಯಾದ ಕಾರಣ ಸುಂದರ ಬೈಂದೂರನ್ನು ಸಮೃದ್ದ ಬೈಂದೂರನ್ನಾಗಿಸುವ ಕನಸು ನನ್ನದಿದೆ.ಸರಕಾರ ನಮ್ಮದಲ್ಲದಿದ್ದರೂ ಕೂಡ ಸಮರ್ಥವಾಗಿ ಹೋರಾಟ ನಡೆಸಬಲ್ಲ ಸಾಮರ್ಥ್ಯ ಇದೆ.ಹೀಗಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧನೆ ಮತ್ತು ಅಭಿವೃದ್ದಿ ಕಾರ್ಯಗಳಲ್ಲಿ ಯಾವುದೇ ರಾಜಕೀಯ ಬೇಡ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಸುರೇಶ ಶೆಟ್ಟಿ,ಚೆನ್ನಕೇಶವ ಉಪಾಧ್ಯ,ತಂಗಪ್ಪನ್,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಪ್ರಿಯದರ್ಶಿನಿ ದೇವಾಡಿಗ,ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ ಮೊದಲಾದವರು ಹಾಜರಿದ್ದರು.
News/pic: Giri shiruru