ಬೈಂದೂರು: ರೋಟರಿ ಕ್ಲಬ್ ಕುಂದಾಪುರ, ಜೆ ಸಿ ಐ ಉಪ್ಪುಂದ, ಲಯನ್ಸ್ ಕ್ಲಬ್ ತಲ್ಲೂರು, ಶ್ರೀ ಮಾರಿಕಾಂಬ ಯುತ್ ಕ್ಲಬ್ (ರಿ) ಕಳವಾಡಿ, ಕೆ.ಎಂ ಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಹಿರಿಯ ಪ್ರಾಥಮಿಕ ಶಾಲೆ ಮಯ್ಯಾಡಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಬೈಂದೂರು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷಎಚ್.ವಸಂತ ಹೆಗ್ಡೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಕುರಿತು ಚಿಕಿತ್ಸೆ ಶಿಬಿರ ಆಯೋಜಿಸುವುದು ಇದು ನಾಗರಿಕರಿಗೆ ಉಪಯುಕ್ತ,ಹಲ್ಲಿನ ಮಹತ್ವದ ಕುರಿತು ತಿಳಿಸಿದರು.
ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ವೆಂಕಟೇಶ್ ಗಾಣಿಗ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ತಲ್ಲೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಗೋಪಾಲ್ ಶೆಟ್ಟಿ ಕಾರಿಕಟ್ಟೆ,ಜೆ ಸಿ ಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಶ್ರೀ.ಧ.ಮ. ಹಿ ಪ್ರಾ.ಶಾಲೆ ಮಯ್ಯಾಡಿಯ ಮುಖ್ಯೋಪಾಧ್ಯಾ ರಾಜು. ಎಸ್.ಮಯ್ಯಾಡಿ,ಮಾರಿಕಾಂಬ ಯೂತ್ ಕ್ಲಬ್ ನ ಅಧ್ಯಕ್ಷ ಗಣಪತಿ ಪೂಜಾರಿ, ದಂತ ಮಹಾವಿದ್ಯಾಲಯದ ವೈದ್ಯಾಧಿಕಾರಿ ಡಾ. ಕಲ್ಯಾಣ್, ಲಯನ್ ಕ್ಲಬ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಜೆಸಿಐ ಉಪ್ಪುಂದದ ನಿಕಟ ಪೂರ್ವ ಅಧ್ಯಕ್ಷ ನಾಗರಾಜ್ ಪೂಜಾರಿ, ರೋಟರಿ ಕ್ಲಬ್ ನ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರಾದ ಗಣೇಶ್ ಐತಾಳ್ ಉಪಸ್ಥಿತರಿದ್ದರು.
ದಂತ ಚಿಕಿತ್ಸಾಲಯ ಕುಂದಾಪುರದ ಡಾ.ರಾಜಾರಾಮ ಶೆಟ್ಟಿ ಮಾರಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪ್ಪುಂದ ಜೆಸಿಐ ಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.