ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ನಾಮಪತ್ರ ಸಲ್ಲಿಕೆ ಮತ್ತು ಬಿಜೆಪಿ ಕಾರ್ಯಕರ್ತರ ಸಮಾವೇಶ ಬೈಂದೂರಿನಲ್ಲಿ ನಡೆಯಿತು.ಬಿಜೆಪಿ ಜನಸಂದಣಿ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಟಾಂಗ್ ನೀಡಿದರು.ನಾಮಪತ್ರ ಸಲ್ಲಿಸಲು ಬೈಂದೂರು ಸೇನೇಶ್ವರ ದೇವಸ್ಥಾನದ ಎದುರುಗಡೆಯಿಂದ ಮೆರವಣಿಗೆ ಮೂಲಕ ಸಾಗಲಾಯಿತು.ಬಳಿಕ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಭಯೋತ್ಪಾದಕ ಎಂದು ಕರೆದಿಲ್ಲ ಬದಲಾಗಿ ಕಾಂಗ್ರೇಸ್ ಪಕ್ಷ ಭಯೋತ್ಪಾದಕರಿಗೆ ಬೆಂಬಲ ನೀಡುವ ಪಕ್ಷ ಎಂದಿದ್ದೇನೆ.ಭಾರತೀಯ ಜನತಾ ಪಕ್ಷ ಸಾಮಾನ್ಯ ಕಾರ್ಯಕರ್ತರನ್ನು ಕೂಡ ಶಾಸಕರನ್ನಾಗಿ ಕಳುಹಿಸುತ್ತದೆ ಎನ್ನುವುದಕ್ಕೆ ಬೈಂದೂರಿನ ಬಿಜೆಪಿ ಅಭ್ಯರ್ಥಿ ಸಾಕ್ಷಿ ಎಂದರು.
ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ಕಳೆದ ಅವಧಿಯಲ್ಲಿ ಅಭಿವೃದ್ದಿ ಕಾರ್ಯಗಳು ಹಾಗೂ ಕಾರ್ಯಕರ್ತರ ಉತ್ಸಾಹ ಬಿಜೆಪಿ ಶಕ್ತಿಯಾಗಿದೆ.ಸಾಮಾನ್ಯ ಕಾರ್ಯಕರ್ತ ಕೂಡ ಅಸಮಾನ್ಯ ಸ್ಥಾನ ಪಡೆಯುತ್ತಾನೆ ಅದು ಬಿಜೆಪಿಯವರಿಂದ ಮಾತ್ರ ಸಾಧ್ಯ.ಬೈಂದೂರು ಬಿಜೆಪಿ ಅಭ್ಯರ್ಥಿ ಒಂದು ಲಕ್ಷ ಮತಗಳ ಅಂತರದಿಂದ ವಿಜಯ ಸಾಧಿಸುತ್ತಾರೆ ಎಂದರು.
ಬಿಜೆಪಿ ಆಭ್ಯರ್ಥಿ ಗುರುರಾಜ ಗಂಟಿಹೊಳೆ ಮಾತನಾಡಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತರಾದವರನ್ನು ಆತನಿಗೆ ವಹಿಸಿದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಾಗಿದೆ.ನಾನು ಕೂಡ ಯಾವತ್ತು ಮುಂದೇನು ಸಿಗುತ್ತದೆ ಎಂದು ಸೇವೆಗೆ ಬಂದವನಲ್ಲ.ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ದೊಡ್ಡ ಜವಬ್ದಾರಿ ನೀಡಿದೆ.ಬಿಜೆಪಿ ಕಾರ್ಯಕರ್ತರ ಪಡೆ ಎದ್ದು ನಿಂತರೆ ಗೆಲುವು ನಿಶ್ಚಿತ ಎಂದರು.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಬೈಂದೂರು ಮಂಡಲದ ಚುನಾವಣಾ ಪ್ರಭಾರಿ ಕ್ಯಾ.ಬ್ರಿಜೇಶ್ ಚೌಟ,ಕಿಶೋರ್ ಕುಮಾರ್ ಕುಂದಾಪುರ,ಪ್ರಣಯ್ ಕುಮಾರ್ ಶೆಟ್ಟಿ,ಸುರೇಶ ಶೆಟ್ಟಿ ಗುರ್ಮೆ,ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಸುರೇಶ ನಾಯಕ್,ಹಾಲಾಡಿ ಶ್ರೀನಿವಾಸ ಶೆಟ್ಟಿ,ಸುರೇಶ ಶೆಟ್ಟಿ ಉಪ್ಪುಂದ,ಸುರೇಶ ಬಟ್ವಾಡಿ,ಬಿಜೆಪಿ ಮಂಡಲದ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರ್,ರೋಹಿತ್ ಕುಮಾರ್ ಶೆಟ್ಟಿ,ಕೃಷ್ಣಪ್ರಸಾದ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
News/pic: Girish shiruru