ಬೈಂದೂರು: ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಪರ ಚುನಾವಣಾ ಪ್ರಚಾರ ಹಾಗೂ ಕಾರ್ಯಕರ್ತರ ಸಮಾವೇಶ ಏಪ್ರಿಲ್ 23 ರಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೈಂದೂರಿಗೆ ಆಗಮಿಸಲಿದ್ದಾರೆ.ಬೈಂದೂರಿನ ಯಡ್ತರೆ ಜೆ.ಎನ್.ಆರ್ ಕಲಾ ಮಂದಿರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು ಇದಕ್ಕೂ ಪೂರ್ವಭಾವಿಯಾಗಿ ಬೈಂದೂರು ಕಾಂಗ್ರೇಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಮಾತನಾಡಿ ಬಿಜೆಪಿ ಪಕ್ಷದ ಕಾರ್ಯವೈಖರಿಯಿಂದ ಬೇಸತ್ತ ಪ್ರಭಾವಿ ಮುಖಂಡರು ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಬ್ರಹತ್ ಸಂಖ್ಯೆಯ ಕಾರ್ಯಕರ್ತರು ಸೇರ್ಪಡೆಯಾಗಲಿದ್ದಾರೆ.ಏಪ್ರಿಲ್ 25 ರಿಂದ ಮನೆ ಮನೆಗೆ ಮತದಾರರ ಬೇಟಿ ಕಾರ್ಯಕ್ರಮ ನಡೆಯಲಿದೆ.ಸಂಜೆ 5 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ.ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಪರ ಉತ್ತಮ ವಾತಾವರಣವಿದೆ.ಬೆಲೆ ಏರಿಕೆ,ನಿರುದ್ಯೋಗ,ಭ್ರಷ್ಟಾಚಾರ,ಕಮಿಷನ್ ವ್ಯವಹಾರದಿಂದ ಜನಸಾಮಾನ್ಯರು ಬಿಜೆಪಿ ಪಕ್ಷದ ಆಡಳಿತದಿಂದ ಬೇಸೆತ್ತು ಹೋಗಿದ್ದಾರೆ ಎಂದರು.
ಗಂಗೊಳ್ಳಿ,ಮರವಂತೆ,ಉಪ್ಪುಂದ ಭಾಗದ ಮೀನುಗಾರರ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಕಳೆದ ಐದು ವರ್ಷಗಳಿಂದ ಮೀನುಗಾರರಿಗೆ ಕೇವಲ ಆಶ್ವಾಸನೆ ಹೊರತುಪಡಿಸಿದರೆ ಬೇರೆನೂ ಕೊಟ್ಟಿಲ್ಲ.ಗಂಗೊಳ್ಳಿ ಮೀನುಗಾರಿಕಾ ಜಟ್ಟಿ ಕುಸಿದು ವರ್ಷ ಕಳೆದರು ರಿಪೇರಿಯಾಗಿಲ್ಲ.2ನೇ ಹಂತದ ಕಾಮಗಾರಿ ಆರಂಭವಾಗಿಲ್ಲ.ಮರವಂತೆ ಬಂದರು ಕಾಮಗಾರಿ ಪೂರ್ಣಗೊಂಡಿಲ್ಲ.ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸರಬರಾಜಾಗಿಲ್ಲ ಈ ಕುರಿತು ಮೀನುಗಾರರು ಚುನಾವಣೆ ಬಹಿಷ್ಕಾರ ಮಾತು ಕೇಳಿಬಂದಿದ್ದು ಅವರನ್ನು ಬೇಟಿಯಾಗಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಆದ್ಯತೆಯಲ್ಲಿ ಇಲ್ಲಿನ ಬೇಡಿಕೆಗಳನ್ನು ಈಡೇರಿಸುತ್ತೇನೆ ಮತ್ತು ಚುನಾವಣೆ ಬಹಿಷ್ಕಾರ ಮಾಡದಂತೆ ಮನವೊಲಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡರುಗಳಾದ ಎಸ್.ರಾಜು ಪೂಜಾರಿ,ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್,ಎಸ್.ಪ್ರಕಾಶ್ಚಂದ್ರ ಶೆಟ್ಟಿ,ಕಾಂಗ್ರೇಸ್ ಪ್ರಚಾರ ಸಮಿತಿಯ ಸುಬ್ರಹ್ಮಣ್ಯ ಭಟ್,ರಘುರಾಮ ಶೆಟ್ಟಿ,ನಾಗರಾಜ ಗಾಣಿಗ,ಜಗದೀಶ ದೇವಾಡಿಗ,ಮೋಹನ ಪೂಜಾರಿ ಉಪ್ಪುಂದ ಉಪಸ್ಥಿತರಿದ್ದರು.
News/Girish shiruru